ಇಸ್ಲಾಮಾಬಾದ್, ಮಾ.16 (DaijiworldNews/HR): ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಕೌನ್ಸಿಲ್ ಆಫ್ ಕಾಮನ್ ಇಂಟರೆಸ್ಟ್ ಸಭೆಯನ್ನು ಎರಡು ತಿಂಗಳಿನಿಂದ ನಡೆಸಲು ವಿಫಲವಾಗಿರುವುದಕ್ಕೆ ಪಾಕಿಸ್ತಾನ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಕಾಜಿ ಫಯೆಜ್ ಇಸಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ದೇಶವನ್ನು ಮುನ್ನಡೆಸುವ ಶಕ್ತಿ ಇಲ್ಲ ಅಥವಾ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದು, ಅಷ್ಟೇ ಅಲ್ಲದೆ, ಸಿಸಿಐ ವರದಿಯನ್ನು ಯಾಕೆ ಗುಪ್ತವಾಗಿ ಇರಿಸಲಾಗಿದೆ ಎಂದೂ ಸರ್ಕಾರವನ್ನು ಪ್ರಶ್ನಿಸಿ, ಸರ್ಕಾರ ಹೀಗೆಯೇ ನಡೆಯುತ್ತದೆಯೇ? ಕೇಂದ್ರ ಮತ್ತು ಪ್ರಾದೇಶಿಕ ಆಡಳಿತ ಏನು ಮಾಡುತ್ತಿದೆ ಎಂದು ದೇಶ ತಿಳಿಯಲು ಬಯಸುತ್ತದೆ" ಎಂದು ಹೇಳಿದ್ದಾರೆ.
ಇನ್ನು ಪಂ"ಜಾಬ್ ಪ್ರಾಂತ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸದಿರುವ ಬಗ್ಗೆಯೂ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ಆಕ್ಷೇಪ ವ್ಯಕ್ತಪಡಿಸಿದ್ದು, ಪಂಜಾಬ್ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದು ಬೇಕಾಗಿಲ್ಲ"ಎಂದು ತಿಳಿಸಿದ್ದಾರೆ.