ಇಸ್ಲಾಮಾಬಾದ್, ಮಾ.18 (DaijiworldNews/HR): ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ಸಂಬಂಧಕ್ಕೆ ಸಮಸ್ಯೆಯಾಗಿದ್ದು, ಈ ಎರಡು ದೇಶಗಳ ನಡುವೆ ಶಾಂತಿ ಸ್ಥಾಪಿಸುವುದಕ್ಕೆ ಮೊದಲ ಹೆಜ್ಜೆಯನ್ನು ಭಾರತವೇ ಇಡಬೇಕು" ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.
ಈ ಕುರಿತು ಇಸ್ಲಾಮಾಬಾದ್ನ ಭದ್ರತೆ ಚರ್ಚೆಯಲ್ಲಿ ಮಾತನಾಡಿದ ಅವರು, "ಕಾಶ್ಮೀರ ಒಂದೇ ಭಾರತ ಹಾಗೂ ಪಾಕಿಸ್ತಾನದ ನಡುವೆ ತಡೇಯಾಗಿದ್ದು, ಎರಡು ರಾಷ್ಟ್ರಗಳ ಸಂಬಂಧ ಗಟ್ಟಿಮಾಡಲು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಭಾರತ ಎರಡೂ ರಾಷ್ಟ್ರಗಳ ಸಂಬಂಧ ಉತ್ತಮವಾಗಲು ಸಹಕರಿಸಬೇಕು" ಎಂದರು.
ಇನ್ನು ನಾನು 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಭಾರತದೊಂದಿಗಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಆಗಸ್ಟ್ 5ರ ನಂತರ ಭಾರತ-ಪಾಕ್ ನಡುವಿನ ಸಂಬಂಧ ಕೆಟ್ಟುಹೊಗಿದ್ದು, ಭಾರತವು ಕಾಶ್ಮೀರಕ್ಕೆ ಸೂಕ್ತ ಸ್ಥಾನಮಾನವನ್ನು ನೀದುವುದರಿಂದ ಭಾರತ ಹಾಗೂ ಪಾಕ್ ಎರಡೂ ದೇಶಗಳಿಗೂ ಒಳ್ಳೆಯಾದಾಗಲಿದೆ ಎಂದಿದ್ದಾರೆ.
"ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿದಲ್ಲಿ ಎರಡೂ ದೇಶಗಳಿಗೆ ಲಾಭವಾಗಲಿದೆ. ಕಾಶ್ಮೀರದಲ್ಲಿ ಬಡತನದ ಇದ್ದು, ಅಲ್ಲಿ ವ್ಯಾಪಾರ, ವಹಿವಾಟು ಹಾಗೂ ಪ್ರಾದೇಶಿಕ ವ್ಯವಹಾರಗಳಿಗೆ ಅವಕಾಶ ಸಿಕ್ಕರೆ ಬಡತನ ನಿರ್ಮೂಲನೆಗೂ ಸಹಾಯವಾಗಲಿದೆ" ಎಂದು ಹೇಳಿದ್ದಾರೆ.