ವಾಷಿಂಗ್ಟನ್, ಮಾ.18 (DaijiworldNews/PY): ಕಾನೂನು ಜಾರಿ ಅಧಿಕಾರಿಗಳು, ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಅಧಿಕೃತ ನಿವಾಸದ ಹೊರಗೆ ಶಸ್ತ್ರಸಜ್ಜಿತ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ವ್ಯಕ್ತಿಯನ್ನು ಪೌಲ್ ಮುರ್ರೆ (31) ಎಂದು ಗುರ್ತಿಸಲಾಗಿದೆ.
"ಅಮೇರಿಕಾ ಉಪಾಧ್ಯಕ್ಷರ ನಿವಾಸ ಇರುವ ನೌಕಾ ವೀಕ್ಷಣಾಲಯದ ಸಮೀಪ ಅನುಮಾನಾಸ್ಪದ ವ್ಯಕ್ತಿಯ ವರದಿಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಗುಪ್ತಚರ ಮಾಹಿತಿಯನ್ನು ಆಧರಿಸಿ ಶಂಕಿತ ವ್ಯಕ್ತಿಯನ್ನು ಗುರುತಿಸಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೌಲ್ ಮುರ್ರೆ ಬಂಧನಕ್ಕೂ ಮುನ್ನ ಆತ ತನ್ನ ತಾಯಿಕೆ ಸಂದೇಶವೊಂದನ್ನು ಕಳುಹಿಸಿದ್ದು, ನಾನು ಈಗ ವಾಷಿಂಗ್ಟನ್ನಲ್ಲಿದ್ದು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇನೆ ಎಂದಿದ್ದ ಎಂದು ತಿಳಿದುಬಂದಿದೆ.