ಮ್ಯಾಂಚೆಸ್ಟರ್, ಮಾ.18 (DaijiworldNews/HR): 24 ವರ್ಷದ ಯುವಕನೊಬ್ಬನ ಇನ್ಸ್ಟಾಗ್ರಾಮ್ ಫಿಲ್ಟರ್ನಂತೆ ಕಾಣಲು 30 ಲಕ್ಷ ರೂ. ಖರ್ಚು ಮಾಡಿದ ಘಟನೆ ಮ್ಯಾಂಚೆಸ್ಟರ್ನಲ್ಲಿ ನಡೆದಿದೆ.
ಲೆವಿ ಜೆಡ್ ಮರ್ಫಿ ಎಂಬಾತ ತುಟಿ, ಗಲ್ಲ, ಕೆನ್ನೆ, ದವಡೆ ಮತ್ತು ಅವನ ಕಣ್ಣುಗಳ ಕೆಳಗೆಶಸ್ತ್ರಚಿಕಿತ್ಸೆ ಮಾಡಿದ ನಂತರ ಒಂದು ವರ್ಷದ ಹಿಂದೆ ನೋಡಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾಣಿಸುತ್ತಾನೆ.
ಆತ ತಾನು ಇನ್ಸ್ಟಾಗ್ರಾಂ ಫಿಲ್ಟರ್ನಂತೆ ಕಾಣಬೇಕೆಂದು 30 ಲಕ್ಷ ರೂ. ತೆತ್ತು ಕಾಸ್ಮೆಟಿಕ್ ಮತ್ತು ಇತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಈ ಮೂಲಕ ಟ್ರೋಲ್ ಆಗಿದ್ದಾನೆ. ಅಷ್ಟೇ ಅಲ್ಲದೆ ಈತನ ಮುಖವನ್ನು ಸಿನಿಮಾವೊಂದರಲ್ಲಿ ಬಳಸುವ ಮಾಸ್ಕ್ಗೂ ಟ್ರೋಲಿಗರು ಹೋಲಿಕೆ ಮಾಡಿದ್ದಾರೆ.
''ನಾನು ಹತ್ತೊಂಬತ್ತು ವರ್ಷದವನಿದ್ದಾಗ ಇನ್ಸ್ಟಾಗ್ರಾಂನಲ್ಲಿ ಫಿಲ್ಟರ್ ಒಂದನ್ನು ನೋಡಿದೆ. ಅದು ನನಗೆ ಬಹಳ ಇಷ್ಟವಾಯಿತು. ಬಳಿಕ ನಾನು ಇನ್ಸ್ಟಾಗ್ರಾಂ ಫಿಲ್ಟರ್ಗಳಂತೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ. ಇದರಿಂದಾಗಿ ನನಗೆ ಬಹಳ ಸಂತೋಷವಾಗಿದೆ'' ಎಂದು ಹೇಳುತ್ತಾನೆ.
ಆದರೆ ಯುವಕ ನಕಾರಾತ್ಮಕ ಕಾಮೆಂಟ್ಗಳಿಗೆ ಹಾಗೂ ಟ್ರೋಲ್ಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾನೆ.