ಮೆಕ್ಸಿಕೋ, ಮಾ.19 (DaijiworldNews/PY): ಪೊಲೀಸ್ ಬೆಂಗಾವಲು ವಾಹನದ ಮೇಲೆ ಡ್ರಗ್ ಗ್ಯಾಂಗ್ವೊಂದು ಗುಂಡಿನ ದಾಳಿ ನಡೆಸಿದ್ದು, 8 ಪೊಲೀಸರು ಹಾಗೂ 3 ಪ್ರಾಸಿಕ್ಯೂಶನ್ ಅಧಿಕಾರಿಗಳನ್ನು ಹತ್ಯೆಗೈದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಸಾರ್ವಜನಿಕ ಸುರಕ್ಷಣಾ ವಿಭಾಗದ ಮುಖ್ಯಸ್ಥ ರೊಡ್ರಿಗೋ ಮಾರ್ಟಿನೆಜ್ ಸೆಲಿಸ್ ಅವರು, "ಮೆಕ್ಸಿಕೋದಲ್ಲಿ ಮೈಕೋವಾಕಾನ್ನಲ್ಲಿ ಕ್ರಿಮಿನಲ್ಸ್ ಗುಂಪುಗಳ ವಿರುದ್ದ ಕ್ರಮ ಕೈಗೊಳ್ಳುವ ಸಲುವಾಗಿ ಪೊಲೀಸ್ ವಾಹನವು ಗಸ್ತು ತಿರುಗುತ್ತಿತ್ತು. ಈ ಸಂದರ್ಭ ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ" ಎಂದು ತಿಳಿಸಿದ್ದಾರೆ.
"ಈ ದಾಳಿಯು ಮೆಕ್ಸಿಕನ್ ಸರ್ಕಾರದ ಮೇಲಿನ ದಾಳಿಯಾಗಿದೆ. ನಮ್ಮೆಲ್ಲರ ಶಕ್ತಿ ಒಗ್ಗೂಡಿಸಿ ಮರು ದಾಳಿ ನಡೆಸುತ್ತೇವೆ" ಎಂದಿದ್ದಾರೆ.
ಘಟನೆಯ ಬಳಿಕ ಮೆಕ್ಸಿಕೋ ನಗರದ ನೈರುತ್ಯ ದಿಕ್ಕಿನಲ್ಲಿರುವ ಗ್ರಾಮೀಣ, ಮಾದಕ ವ್ಯಸನಿಗಳಿರುವ ಪ್ರದೇಶಗಳಲ್ಲಿ ಕೊಲೆಗಡುಕರಿಗಾಗಿ ಶೋಧ ನಡೆಸಲಾಗುತ್ತಿದೆ.