ಇಂಗ್ಲೆಂಡ್, ಮಾ.20 (DaijiworldNews/PY): ಮಹಿಳೆಯೊಬ್ಬರು ನವಜಾತ ಶಿಶುವನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ.
29 ವರ್ಷದ ಮಹಿಳೆ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು. ನಂತರ ಆಕೆ ಆ ಮಗುವನ್ನು ಬಿಸಿ ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿದ್ದಾಳೆ. ಅಲ್ಲದೇ, ಆಕೆ ಮಗುವಿನ ಶವವನ್ನು ಸಮಾಧಿ ಮಾಡಿದ್ದಳು.
ನವಜಾತ ಶಿಶುವನ್ನು ಕುದಿಯುತ್ತಿರುವ ನೀರಿನಲ್ಲಿ ಹಾಕಿದ ತಾಯಿ, ಮಗು ಸತ್ತ ಬಳೀಕ ಅದನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಜಮೀನಲ್ಲಿ ಹೂತಿದ್ದಾಳೆ. ನಂತರ ಆಕೆ ಈ ವಿಚಾರವನ್ನು ತನ್ನ ಸ್ನೇಹಿತೆಯ ಬಳಿ ಹೇಳಿಕೊಂಡಿದ್ದಾಳೆ. ಆದರೆ, ಆಕೆಯ ಸ್ನೇಹಿತೆ ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾಳೆ.
ಪ್ರಾಥಮಿಕ ತನಿಖೆಯ ಸಂದರ್ಭ ಮಹಿಳೆ ಮಗುವನ್ನು ಆಳವಾದ ಗುಂಡಿಯಲ್ಲಿ ಹೂತಿದ್ದಳು ಎಂದು ತಿಳಿದುಬಂದಿದೆ. ನವಜಾತ ಶಿಶುವನ್ನು ಕೊಂಡ ಆರೋಪದಡಿ ತಾಯಿ ವಿರುದ್ದ ದೂರು ದಾಖಲಾಗಿದ್ದು, ಆಕೆಯನ್ನು ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಅಪರಾಧಿ ಮಹಿಳೆಯ ಗೆಳತಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.