ಟೋಕಿಯೊ, ಮಾ 20(DaijiworldNews/MS): ತಂತ್ರಜ್ಞಾನ ಇಂದಿನ ಅವಿಭಾಜ್ಯ ಅಂಗ. ವೇಗದ ತಂತ್ರಜ್ಞಾನದ ಈ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ನಿಜ ಜೀವನದಲ್ಲಿರುವ ವ್ಯಕ್ತಿತ್ವಕ್ಕಿಂತ ಭಿನ್ನವಾಗಿರುತ್ತದೆ. ಇಲ್ಲಿ ಮೋಸ ಹೋಗುವುದು ಅತಿ ಸುಲಭ.
ಜಪಾನಿನಲ್ಲಿ ನಡೆದ ಘಟನೆ ಇದಕ್ಕೆ ತಾಜಾ ಉದಾಹರಣೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯ ವ್ಯಕ್ತಿತ್ವ ಬಿಡಿ, ಇಲ್ಲಿ ವ್ಯಕ್ತಿಯೇ ಸ್ವತಃ ಬೇರೊಬ್ಬನಾಗಿದ್ದಾನೆ! ಅಜುಸಾಗಾಕುಯುಕಿ ಎಂಬ ಬೈಕರ್ ಯುವತಿ 20,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು ನಿಯಮಿತವಾಗಿ 'ಸೆಲ್ಪಿ ಪೋಟೋಗಳನ್ನು ಜಾಕೆಟ್ ಧರಿಸಿ ಪೋಸ್ಟ್ ಮಾಡುತ್ತಾಳೆ, ಜಪಾನ್ನಲ್ಲಿ 'ಅವಳ' ಜೀವನದ ಆಗುಹೋಗುಗಳನ್ನು ಫಾಲೋವರ್ಸ್ಗಾಗಿ ದಾಖಲಿಸುತ್ತಾಳೆ, ಅಷ್ಟೇ ಅಲ್ಲದೆ ಸುಂದರವಾದ ಸ್ಥಳಗಳಲ್ಲಿ ಪೋಸ್ ನೀಡುತ್ತಾ ಎಲ್ಲವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾಳೆ.
ಆದರೆ, ಜಪಾನಿನ ಮನರಂಜನಾ ಟಿವಿ ಕಾರ್ಯಕ್ರಮವೊಂದು ಟ್ವಿಟ್ಟರ್ ಫೀಡ್ನ ಸೃಷ್ಟಿಕರ್ತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದಾಗ ಸತ್ಯಸಂಗತಿ ಬಹಿರಂಗಗೊಂಡಿದೆ.ಹೌದು, ಜಪಾನಿನ ಜನಪ್ರಿಯ "ಬೈಕರ್ ಮಹಿಳೆ " ಜೊಂಗು ಎಂಬ ಹೆಸರಿನ 50 ವರ್ಷದ ವ್ಯಕ್ತಿ ಎಂದು ಬಹಿರಂಗವಾದ ನಂತರ ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರು ತಾವು ಮೂರ್ಖರಾಗಿದ್ದನ್ನು ಕಂಡು ದಂಗಾಗಿದ್ದಾರೆ.
ಮೋಟಾರು ಬೈಕಿನ ಸವಾರ 50 ವರ್ಷದ ವ್ಯಕ್ತಿಯಾಗಿದ್ದು ಫೇಸ್ಆಪ್ ಮತ್ತು ಫೋಟೋಶಾಪ್ ಬಳಸಿ ಯುವತಿಯಂತೆ ಕಾಣುವ ಪೋಸ್ಟ್ ಮಾಡುತ್ತಿದ್ದರು. ಬೈಕರ್ ಯುವತಿಯನ್ನು ಕಂಡು ಟ್ವಿಟರ್ ನಲ್ಲಿ 20,000 ಕ್ಕೂ ಹೆಚ್ಚು ಜನ ಈಕೆಯ ಅನುಯಾಯಿಗಳಾಗಿದ್ದರು. ಆದರೆ ಇದೀಗ ಬಹಿರಂಗಗೊಂಡ ಸತ್ಯದಿಂದ ಫಾಲೋವರ್ಸ್ ಪೆಚ್ಚಾಗಿದ್ದಾರೆ.
ಇಲ್ಲಿದೆ ಬೈಕರ್ ಯುವತಿಯ ಟ್ವೀಟರ್