ಕರಾಚಿ, ಮಾ 20(DaijiworldNews/MS): ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮನೆಯಲ್ಲೇ ಐಸೋಲೇಶನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇಮ್ರಾನ್ ಖಾನ್ ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಸಹ ಮುಂಜಾಗೃತಾ ಕ್ರಮವಾಗಿ ಐಸೋಲೇಶನ್ ಗೆ ಒಳಗಾಗಿದ್ದು, ವೈದ್ಯರು ಅವರ ಆರೋಗ್ಯದ ಕುರಿತು ತೀವ್ರ ನಿಗಾ ಇರಿಸಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ಕರೋನ ಲಸಿಕೆಯ ಮೊದಲ ಡೋಸ್ ಪಡೆದುಕೊಂಡ ನಂತರ ಅವರಿಗೆ ಸೊಂಕು ತಗುಲಿದೆ ಎನ್ನಲಾಗಿದೆ. ಪಾಕಿಸ್ತಾನದ ಆರೋಗ್ಯ ಸಚಿವ ಫೈಸಲ್ ಸುಲ್ತಾನ್ ಶನಿವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಈ ಮೊದಲು ಸಹ ಕೊರೊನಾ ಸೋಂಕು ಉಲ್ಬಣಿಸಿದ್ದು, ಇತ್ತೀಚೆಗಷ್ಟೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಲಸಿಕೆಯನ್ನು ಕಳುಹಿಸಿಕೊಟ್ಟಿವೆ. ಪ್ರಸ್ತುತ ಪಾಕಿಸ್ತಾನದಲ್ಲಿ ಮೊದಲ ಹಂತದಲ್ಲಿದ್ದ ರಾಷ್ಟ್ರವ್ಯಾಪಿ ಕರೋನವೈರಸ್ ವ್ಯಾಕ್ಸಿನೇಷನ್ ಅಭಿಯಾನದ ಭಾಗವಾಗಿ ಅವರಿಗೆ ಪ್ರಧಾನಿ ಇಮ್ರಾನ್ ಖಾನ್ ಎರಡು ದಿನಗಳ ಹಿಂದೆ ಲಸಿಕೆ ಪಡೆದುಕೊಂಡಿದ್ದರೆ. "ಈ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಲಸಿಕೆಯ ಅಭಿಯಾನ ಯಶಸ್ವಿಯಾಗಿಸಲು ಅವರು ರಾಷ್ಟ್ರಕ್ಕೆ ಮನವಿ ಮಾಡಿದ್ದರು.