ರಿಯಾದ್, ಮಾ 21(DaijiworldNews/MS): ಸೌದಿ ಅರೇಬಿಯ ದೇಶವೂ, ಪಾಕಿಸ್ತಾನ ಸಹಿತ ನಾಲ್ಕು ದೇಶಗಳ ಮಹಿಳೆಯರನ್ನು ವಿವಾಹವಾಗುವಂತಿಲ್ಲ ಎಂದು ನಿರ್ಬಂಧ ಹೇರಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.
ವಿದೇಶಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮದುವೆಯಾಗುವುದನ್ನು ತಪ್ಪಿಸಲು ಇಂತಹ ಕ್ರಮ ಕೈಗೊಳ್ಳಲಾಗಿದೆ.ಪಾಕಿಸ್ತಾನ, ಛಾಡ್ ಬಾಂಗ್ಲಾದೇಶ ಮಯನ್ಮಾರ್ ಮಹಿಳೆಯರಿಗೆ ಈ ಆದೇಶ ಅನ್ವಯವಾಗಲಿದೆ.ಒಂದು ವೇಳೆ ಪುರುಷರ ವಿದೇಶಿ ಮಹಿಳೆಯರನ್ನು ಮದುವೆಯಾಗುವುದಿದ್ದರೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.ವಿದೇಶಿ ಮಹಿಳೆಯನ್ನು ಮದುವೆಯಾಗುವುದರ ಬಗ್ಗೆ ಅರ್ಜಿ ಬರೆದು ಸರಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಅರ್ಜಿದಾರರು 25 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಸ್ಥಳೀಯ ಜಿಲ್ಲಾ ಮೇಯರ್ ಸಹಿ ಮಾಡಿದ ಗುರುತಿನ ದಾಖಲೆಗಳು ಮತ್ತು ಅವರ ಕುಟುಂಬ ಕಾರ್ಡ್ನ ಪ್ರತಿ ಸೇರಿದಂತೆ ಇತರ ಎಲ್ಲಾ ಗುರುತಿನ ಪತ್ರಗಳನ್ನು ಲಗತ್ತಿಸಬೇಕಾಗುತ್ತದೆ.
ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳಿಂದ ಸುಮಾರು 500,000 ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸಿಸುತ್ತಿದ್ದಾರೆ.