ಇಸ್ಲಾಮಾಬಾದ್, ಮಾ.22 (DaijiworldNews/HR): ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ಮತ್ತು ಮೊದಲ ಮದ್ರಸಾವೊಂದು ಪಾಕಿಸ್ತಾನದಲ್ಲಿ ಆರಂಭವಾಗಿದ್ದು, ಇದನ್ನು ಆರಂಭಿಸಿದ್ದು ರಾಣಿ ಖಾನ್ ಎಂಬ ಲೈಂಗಿಕ ಅಲ್ಪಸಂಖ್ಯಾತ ಮಹಿಳೆ ಎಂದು ತಿಳಿದು ಬಂದಿದೆ.
ಈ ಕುತು ಮಾತನಾಡಿದ ರಾಣಿ ಖಾನ್, "ಬಹುತೇಕ ಕುಟುಂಬಗಳು ಲೈಂಗಿಕ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುವುದಿಲ್ಲ. ಅವರನ್ನು ಮನೆಯಿಂದ ಹೊರಗೆ ಓಡಿಸುತ್ತಾರೆ. ಇದರಿಂದ ಕೆಲವೊಮ್ಮೆ ಅವರು ತಪ್ಪು ಕೆಲಸಗಳನ್ನು ಆಯ್ದುಕೊಳ್ಳುತ್ತಾರೆ" ಎಂದರು.
"ತಾನು ಕೂಡ ಈ ರೀತಿಯ ಸಮಸ್ಯೆ ಎದುರಿಸಿದ್ದು, 13ನೇ ವಯಸ್ಸಿಗೆ ಮನೆಯಿಂದ ಹೊರಹಾಕಲ್ಪಟ್ಟು, ಭಿಕ್ಷಾಟನೆಗೆ ತೆರಳಬೇಕಾಯಿತು ಎಂದು ಹೇಳಿಕೊಂಡಿರುವ ಖಾನ್, 17ನೇ ವಯಸ್ಸಿಗೆ ಲೈಂಗಿಕ ಅಲ್ಪಸಂಖ್ಯಾತರ ಗುಂಪು ಸೇರಿಕೊಳ್ಳಬೇಕಾಯಿತು" ಎಂದು ಹೇಳಿದ್ದಾರೆ.
ಇನ್ನು ಪಾಕಿಸ್ತಾನ ಸಂಸತ್ 2018ರಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾನ್ಯತೆ ನೀಡಿದೆ.