ವಾಷಿಂಗ್ಟನ್, ಮಾ. 24 (DaijiworldNews/HR): ಅಮೇರಿಕಾ ಅಧ್ಯಕ್ಷ ಜೊ ಬಿಡೆನ್ ಅವರ ಸರ್ಜನ್ ಜನರಲ್ ಆಗಿ ಭಾರತೀಯ ಮೂಲದ ಅಮೇರಿಕಾ ವೈದ್ಯ ವಿವೇಕ್ ಮೂರ್ತಿ ನೇಮಕವನ್ನು ಅಮೇರಿಕಾದ ಸೆನೆಟ್ ದೃಢಪಡಿಸಿದೆ.
ಅಮೇರಿಕಾದಲ್ಲಿ ಕೊರೊನಾ ಹೆಚ್ಚಳವಾದ ಸಮಯದಲ್ಲಿ ವಿವೇಕ್ ಮೂರ್ತಿಯವರಿಗೆ ಸರ್ಕಾರ ಬಹಳ ಮುಖ್ಯ ಜವಾಬ್ದಾರಿ ನೀಡಿದ್ದು, ವಿವೇಕ್ ಮೂರ್ತಿಯವರು ಎರಡನೇ ಬಾರಿಗೆ ಸರ್ಜನ್ ಜನರಲ್ ಆಗಿ ನೇಮಕಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು 2011 ರಲ್ಲಿ ಅಧ್ಯಕ್ಷರಾಗಿದ್ದ ಬರಾಕ್ ಓಬಾಮ ಅವರು, ಆರೋಗ್ಯ ಪ್ರಚಾರ ಮತ್ತು ಸಮಗ್ರ ಮತ್ತು ಸಾರ್ವಜನಿಕ ಆರೋಗ್ಯದ ಸಲಹಾ ಗುಂಪಿನಲ್ಲಿ ಸೇವೆ ಸಲ್ಲಿಸಲು ವಿವೇಕ್ ಮೂರ್ತಿಯವರನ್ನು ನೇಮಕ ಮಾಡಿದ್ದರು.