ಗ್ರೇಟರ್ ಮ್ಯಾಂಚೆಸ್ಟರ್, ಮಾ.25 (DaijiworldNews/MB) : ಡ್ರೈವಿಂಗ್ ಲೈಸನ್ಸ್ ಪಡೆಯಬೇಕಾದರೆ ಇಷ್ಟೇ ವಯಸ್ಸು ಆಗಬೇಕೆಂಬ ನಿಯಮ ವಿಶ್ವದಾದ್ಯಂತ ಇದೆ. ನಿಯಮ ಉಲ್ಲಂಘನೆ ಮಾಡಿದ ಅಪ್ರಾಪ್ತರು ತಮಗೆ 18 ವರ್ಷ ಆಗಿದೆ ಎಂದು ಹೇಳಿಕೊಂಡು ತಪ್ಪಿಸಲು ಯತ್ನಿಸುವುದು ಕೂಡಾ ಹಲವು ಬಾರಿ ನಡೆಯುತ್ತದೆ. ಆದರೆ ಇಲ್ಲೊಬ್ಬ 17 ವರ್ಷದ ಬಾಲಕ ತನಗೆ 43 ವರ್ಷ ಆಗಿದೆ ಎಂದು ಹೇಳಿ ಟ್ರಾಫಿಕ್ ಪೊಲೀಸರಿಂದು ತಪ್ಪಿಸಲು ಯತ್ನಿಸಿದ ಘಟನೆ ನಡೆದಿದೆ.
ಹೌದು, ಗ್ರೇಟರ್ ಮ್ಯಾಂಚೆಸ್ಟರ್ನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಟ್ವೀಟರ್ ಮೂಲಕ ಅಧಿಕೃತ ಮಾಹಿತಿಯನ್ನು ಗ್ರೇಟರ್ ಮ್ಯಾಂಚೆಸ್ಟರ್ ಟ್ರಾಫಿಕ್ ಪೊಲೀಸರು ನೀಡಿದ್ದಾರೆ.
17 ವರ್ಷದ ಬಾಲಕ ಕಾರು ಚಲಾಯಿಸಿದ್ದಲ್ಲದೆ ತಾನು 43 ವರ್ಷದವನೆಂದು ಸಾಬೀತುಪಡಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆತನ ವಿರುದ್ದ ಕ್ರಮ ಕೈಗೊಳ್ಳಲು ಕೂಡಾ ಮುಂದಾಗಿದ್ದಾರೆ.
ಮಾರ್ಗದ ಮಧ್ಯೆ ಕಾರನ್ನು ತಡೆಯಲಾಯಿತು. 17 ವರ್ಷದ ಚಾಲಕ ತಾನು ನಿಜವಾಗಿ 43 ವರ್ಷ ಎಂದು ಹೇಳಿಕೊಳ್ಳಲು ಪ್ರಯತ್ನಿಸಿದ. ಆದರೆ ನಾವು ಅದನ್ನು ಒಪ್ಪಿಲ್ಲ. ನಿಜವಾದ ಮಾಹಿತಿ ಸಂಗ್ರಹಿಸಿದ್ದೇವೆ, ಆತನ ವಿರುದ್ದ ಕ್ರಮಕೈಗೊಳ್ಳಲಾಗುತ್ತದೆ. ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಟ್ರಾಫಿಕ್ ಪೊಲೀಸರು ಟ್ವೀಟರ್ ಮೂಲಕ ತಿಳಿಸಿದ್ದಾರೆ.