ಈಜಿಪ್ಟ್, ಮಾ. 26(DaijiworldNews/HR): ಈಜಿಪ್ಟ್ನಲ್ಲಿರುವ ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಅತ್ಯಂತ ದೊಡ್ಡ ಸರಕು ಸಾಗಣೆ ಹಡಗು ಎವರ್ ಗಿವನ್ನಲ್ಲಿರುವ ಎಲ್ಲ 25 ಸಿಬ್ಬಂದಿ ಭಾರತೀಯರು ಎಂದು ತಿಳಿದುಬಂದಿದೆ.
ಹಡಗು ಕಾಲುವೆಯಲ್ಲಿ ಸಿಲುಕಿಕೊಂಡಿದ್ದು, ಅದನ್ನು ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಯತ್ನಿಸಲಾಗುತ್ತಿದ್ದು, ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಜಪಾನ್ ಮೂಲದ ಎವರ್ ಗಿವನ್ ಹಡಗಿನ ಮಾಲೀಕರು ಹೇಳಿದ್ದಾರೆ.
ಇನ್ನು ಹಡಗು ಬಲವಾದ ಗಾಳಿಗೆ ಸಿಲುಕಿ ಬದಿಗೆ ವಾಲಿದ್ದು, ಅದಕ್ಕೆ ತಾಂತ್ರಿಕ ದೋಷ ಕಾರಣವಲ್ಲ ಎಂದು ಹಡಗಿನ ಮ್ಯಾನೇಜರ್ ತಿಳಿಸಿದ್ದಾರೆ.
ಹಡಗು ಸುಮಾರು 1,300 ಅಡಿ ಉದ್ದ ಮತ್ತು 2,00,000 ಮೆಟ್ರಿಕ್ ಟನ್ ಭಾರ ಹೊಂದಿದೆ ಎನ್ನಲಾಗಿದೆ.