ಕೈರೋ, ಮಾ.27 (DaijiworldNews/PY): ಎರಡು ರೈಲುಗಳ ನಡುವೆ ನಡೆದ ಭೀಕರ ರೈಲು ಅಪಘಾತದಲ್ಲಿ 32 ಮಂದಿ ಮೃತಪಟ್ಟು, 66 ಮಂದಿ ಗಾಯಗೊಂಡ ಘಟನೆ ದಕ್ಷಿಣ ಈಜಿಫ್ಟ್ನ ಕರಾವಳಿ ನಗರ ಅಲೆಗ್ಸಾಂಡ್ರಿಯಾದಲ್ಲಿ ನಡೆದಿದೆ.
ಮೂಲಗಳ ಪ್ರಕಾರ, "ಕೈರೋಗೆ ತೆರಳುತ್ತಿದ್ದ ಸಬ್ಅರ್ಬಲ್ ರೈಲು ಖೋರ್ಷಿದ್ ನಿಲ್ದಾಣದ ಬಳಿ ಇನ್ನೊಂದು ರೈಲಿಗೆ ಢಿಕ್ಕಿಯಾದ ಪರಿಣಾಮ ಒಂದು ರೈಲಿನ ಎಂಜಿನ್ ಹಾಗೂ ಮತ್ತೊಂಡು ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ" ಎಂದು ಈಜಿಪ್ಟ್ ರೈಲ್ವೆ ಪ್ರಾಧಿಕಾರ ಹೇಳಿದೆ.
"ಈಜಿಫ್ಟ್ನ ಅಪ್ಪರ್ ಸೊಹಾಗ್ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಮೊದಲ ರೈಲಿನ ತುರ್ತು ವಾಲ್ಟ್ ಅನ್ನು ಎಳೆದ ವೇಳೆ ರೈಲು ನಿಂತಿದ್ದು, ಈ ಸಂದರ್ಭ ಹಿಂದಿನಿಂದ ಬಂದ ಇನ್ನೊಂದು ರೈಲು ಢಿಕ್ಕಿಯಾಗಿದೆ" ಎಂದು ಈಜಿಫ್ಟ್ನ ಸಾರಿಗೆ ಸಚಿವಾಲಯ ತಿಳಿಸಿದೆ.
"ರೈಲುರೋಡ್ನ ಸ್ವಿಚ್ ದೋಷದ ಪರಿಣಾಮ ಈ ಅಪಘಾತ ಸಂಭವಿಸಿದೆ" ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.
"ಅಪಘಾತದಲ್ಲಿ ಇಲ್ಲಿಯವರೆಗೆ 32 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳು ಮುಂದುವರೆದಿದೆ" ಎಂದು ಆರೋಗ್ಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.