ಮಯನ್ಮಾರ್, ಮಾ.27 (DaijiworldNews/MB) : ಮಯನ್ಮಾರ್ನಲ್ಲಿ ಸೇನೆ ಆಡಳಿತವನ್ನು ಖಂಡಿಸಿ ನಡೆಯುತ್ತಿರುವ ಹೋರಾಟದಲ್ಲಿ ಶನಿವಾರ 91 ಮಂದಿ ಪ್ರತಿಭಟನಾಕಾರರನ್ನು ಮಯನ್ಮಾರ್ ಭದ್ರತಾ ಪಡೆ ಗುಂಡಿಕ್ಕಿ ಕೊಂದಿದ್ದು ಈ ದಿನವನ್ನು ಮಯನ್ಮಾರ್ ಸೇನಾ ಪಡೆ ನಾಚಿಕೆ ಪಡುವ ದಿನ ಎಂದು ಸೇನೆಯ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಯಂಗಾನ್, ಮಂಡಾಲ ಹಾಗೂ ಇತರೆ ನಗರಗಳಲ್ಲಿ ಮಿಲಿಟರಿ ದಂಗೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಲ್ಲಿದ್ದು ಮಯನ್ಮಾರ್ ಸೇನಾ ಪಡೆ ತಿಭಟನೆ ನಡೆಸುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಬಹುದು ಎಂಬ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಈವರೆಗೆ 300ಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿದೆ. ಶನಿವಾರ ಮತ್ತೆ 91 ಮಂದಿಯನ್ನು ಕೊಲ್ಲಲಾಗಿದೆ.
ಯಾಂಗೊನ್ನ ಥಾಮೈನ್ನಲ್ಲಿ ಒಂದು ವರ್ಷದ ಆಡುತ್ತಿದ್ದ ಮಗುವಿನ ಕಣ್ಣಿಗೆ ಸೇನೆಯು ರಬ್ಬರ್ ಗುಂಡು ಹಾರಿಸಿದ ಘಟನೆ ಶನಿವಾರ ನಡೆದಿದೆ.
ಜುಂತಾ ವಿರೋಧಿ ಸಿಆರ್ಪಿಎಚ್ ವಕ್ತಾರ ಡಾ. ಸಾಸಾ ಈ ಬೆಳವಣಿಗೆಗೆ ಖಂಡನೆ ವ್ಯಕ್ತಪಡಿಸಿದ್ದು ಇದು ಮಯನ್ಮಾರ್ ಸೇನಾ ಪಡೆ ನಾಚಿಗೆ ಪಡುವ ದಿನ. 300 ಅಮಾಯಕರನ್ನು ಕೊಂದು ಮಿಲಿಟರಿ ಪಡೆಯವರು ಸಶಸ್ತ್ರ ಪಡೆ ದಿನವನ್ನು ಆಚರಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗೆ 2,981 ಮಂದಿಯನ್ನು ಬಂಧಿಸಲಾಗಿದೆ.