ಥೈಲೆಂಡ್, ಮಾ.27 (DaijiworldNews/PY): ಮನೆಗೆ ಕನ್ನ ಹಾಕಲು ಬಂದ ದರೋಡೆಕೋರ ವಸ್ತುಗಳೊಂದಿಗೆ ಪರಾರಿಯಾಗುವ ಬದಲು ಪೊಲೀಸ್ ಮನೆಯಲ್ಲಿ ಆರಾಮವಾಗಿ ನಿದ್ರಿಸಿದ ಘಟನೆ ಥೈಲೆಂಡ್ನಲ್ಲಿ ನಡೆದಿದೆ.
ದರೋಡೆ ನಡೆಸಲೆಂದು ಬಂದ ವೇಳೆ ದುರಾದೃಷ್ಟವಶಾತ್ ಪೊಲೀಸ್ ಓರ್ವರ ಮನೆಗೆ ಬಂದು ಸೇರಿದ್ದು, ವಸ್ತುಗಳೊಂದಿಗೆ ಪರಾರಿಯಾಗುವ ಬದಲು ಆತ ಆರಾಮವಾಗಿ ನಿದ್ರೆಗೆ ಜಾರಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿಗಳು ಆತನನ್ನು ಎಚ್ಚರಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಥೈಗರ್ ಪ್ರಕಾರ, ಮುಂಜಾನೆ 2 ಗಂಟೆಯ ಸುಮಾರಿಗೆ ಫೆಟ್ಟಾಬುಲ್ ಪ್ರಾಂತ್ಯದ ವಿಚಿಯನ್ ಬುರಿ ಜಿಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೋರ್ವರ ಮನೆಗೆ ಕಳ್ಳ ನುಗ್ಗಿದ್ದು, ಈ ವೇಳೆ ಪೊಲೀಸ್ ಅಧಿಕಾರಿ ಮನೆಯಲ್ಲಿ ನಿದ್ರಿಸುತ್ತಿದ್ದರು.
ಅಥಿನ್ ಕಿನ್ ಖುಂತುದ್ (22) ಎಂಬಾತ ಕಳ್ಳತನ ನಡೆಸಲೆಂದು ಆ ಪ್ರಾಂತ್ಯಕ್ಕೆ ಬಂದಿದ್ದ. ಆದರೆ, ದುರದೃಷ್ಟ ಎಂಬತೆ ಆತ ಕಳ್ಳತನ ಮಾಡಲೆಂದು ತಿಳಿಯದೇ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿದ್ದಾನೆ. ತುಂಬಾ ದಣಿದಿದ್ದ ಆತ ಮನೆಯ ಮಾಲೀಕನ ಮಗ ಕೋಣೆಯಲ್ಲಿದ್ದ ಎ.ಸಿಯನ್ನು ಆನ್ ಮಾಡಿದ್ದ, ಈ ವೇಳೆ ಆತ ನಿದ್ರೆಗೆ ಜಾರಿದ್ದಾನೆ.
ಆದರೆ, ಕಳ್ಳ ಹೆಚ್ಚು ಹೊತ್ತು ಮಲಗಿದ್ದಾನೆ. ಈ ಸಂದರ್ಭ ಇತರ ಕೋಣೆಯಲ್ಲಿ ಎ.ಸಿ ಆನ್ನಲ್ಲಿರುವುದನ್ನು ಪೊಲೀಸ್ ಅಧಿಕಾರಿ ಗಮನಿಸಿದ್ದಾರೆ. ಮಗಳು ಮನೆಯಲ್ಲಿ ಇಲ್ಲದ ಕಾರಣ ಆಕೆಯ ಕೋಣೆಯ ಎ.ಸಿ ಹೇಗೆ ಆನ್ ಆಗಿದೆ ಎಂದು ಪೊಲೀಸ್ ಅಧಿಕಾರಿ ಆಶ್ಚರ್ಯಗೊಂಡಿದ್ದಾರೆ. ಈ ವೇಳೆ ಮಗಳ ಕೋಣೆಗೆ ತೆರಳಿದ ಪೊಲೀಸ್ ಅಧಿಕಾರಿ ಯಾರೋ ಅಪರಿಚಿತ ವ್ಯಕ್ತಿ ಕಂಬಳಿ ಹೊದ್ದು ಆರಾಮವಾಗಿ ಮಲಗಿದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ.
ಈ ವೇಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬಂದು ಕಳ್ಳನನ್ನು ನಿದ್ರೆಯಿಂದ ಎಬ್ಬಿಸಿ, ಬಂಧಿಸಿದ್ದಾರೆ. ಈ ವೇಳೆ ಎಚ್ಚರಗೊಂಡ ಕಳ್ಳ ಪೊಲೀಸರಿದ್ದ ಕೋಣೆ ನೋಡಿ ದಿಗ್ಭ್ರಮೆಗೊಂಡಿದ್ದಾನೆ.