ವಾಷಿಂಗ್ಟನ್, ಮಾ.29 (DaijiworldNews/PY): ಮಯನ್ಮಾರ್ನಲ್ಲಿ ಸೇನೆ ಆಡಳಿತವನ್ನು ಖಂಡಿಸಿ ನಡೆಯುತ್ತಿರುವ ಹೋರಾಟದಲ್ಲಿ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿರುವ ಘಟನೆಯನ್ನು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ತೀವ್ರವಾಗಿ ಖಂಡಿಸಿದ್ದು, "ಇದು ನಿಜಕ್ಕೂ ಅತಿರೇಕದ ಘಟನೆ" ಎಂದಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡೆನ್, "ಇದೊಂದು ಭಯಾನಕ ಘಟನೆ. ನನಗೆ ಲಭಿಸಿದ ವರದಿಗಳ ಪ್ರಕಾರ ನಾಗರಿಕರನ್ನು ಅನಗತ್ಯವಾಗಿ ಹತ್ಯೆ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಮಯನ್ಮಾರ್ನಲ್ಲಿ ಸೇನೆ ಆಡಳಿತವನ್ನು ಖಂಡಿಸಿ ನಡೆಯುತ್ತಿರುವ ಹೋರಾಟದಲ್ಲಿ ಪ್ರತಿಭಟನಾಕಾರರನ್ನು ಮಯನ್ಮಾರ್ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದ್ದು, ಶನಿವಾರ ಒಂದೇ ದಿನದಲ್ಲಿ ಸಿಮಾರು 114 ಮಂದಿ ಹತ್ಯೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಯನ್ಮಾರ್ನ ಭದ್ರತಾ ಪಡೆಗಳು ಯಾಂಗೂನ್ನಲ್ಲಿರುವ ಅಮೇರಿಕಾ ಕೇಂದ್ರ ಮೇಲೂ ಕೂಡಾ ದಾಳಿ ನಡೆಸಿತ್ತು ಎಂದು ಎಂದು ವರದಿಯಾಗಿದೆ.
"ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲಾಗುವುದು" ಎಂದು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಗ್ರೆಗರು ಮೀಕ್ಸ್ ತಿಳಿಸಿದ್ದಾರೆ.
"ಮಯನ್ಮಾರ್ನಲ್ಲಿ ಸಶಸ್ತ್ರ ಪಡೆ ದಿನದಂದೇ ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಯಾಂಗೂನ್ಲ್ಲಿ ಅಮೇರಿಕಾದ ದಾಳಿಯನ್ನು ಎಂದಿಗೂ ಸಮರ್ಥಿಸಲಾಗದು" ಎಂದಿದ್ದಾರೆ.