ರಿಯೊ ಡಿ ಜನೈರೊ, ಮಾ.30 (DaijiworldNews/HR): ಕೊರೊನಾ ಲಸಿಕೆ ಸಂಗ್ರಹದಲ್ಲಿ ಹಿಂದುಳಿದ ಕಾರಣಗಳಿಂದ ಬ್ರೆಜಿಲ್ನ ವಿದೇಶಾಂಗ ವ್ಯವಹಾರಗಳ ಸಚಿವ ಎರ್ನೆಸ್ಟೊ ಅರೌಜೊ ಭಾರಿ ಅವರನ್ನು ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ, ವಿದೇಶಾಂಗ ಖಾತೆ ಸೇರಿದಂತೆ ಸಂಪುಟ ಸಚಿವರ ಖಾತೆಯನ್ನು ಬದಲಾವಣೆ ಮಾಡಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ
ಬ್ರೆಜಿಲ್ನಲ್ಲಿ ಕೊರೊನಾ ನಿಯಂತ್ರಣ ಸವಾಲಾಗಿ ಪರಿಣಮಿಸಿದ್ದು, ಪರಿಸ್ಥಿತಿಯ ಸೂಕ್ತ ನಿರ್ವಹಣೆಗಾಗಿ ಅಧ್ಯಕ್ಷ ಬೊಲ್ಸೊನಾರೊ ಆಡಳಿತದಲ್ಲಿ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದ್ದು, ಸೋಮವಾರ ವಿದೇಶಾಂಗ, ರಕ್ಷಣಾ ಖಾತೆ ಸಚಿವರು, ಅಟಾರ್ನಿ ಜನರಲ್ ಹಾಗೂ ಸೇನಾ ಮುಖ್ಯಸ್ಥರನ್ನು ಬದಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಬ್ರೆಜಿಲ್ನಲ್ಲಿ ಕೊರೊನಾದಿಂದ 3.14 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಬೊಲ್ಸೊನಾರೊ, ಮಾರ್ಚ್ ಮಧ್ಯದಲ್ಲಿ ಆರೋಗ್ಯ ಖಾತೆ ಸಚಿವರನ್ನು ಬದಲಿಸಿದ್ದರು. ಕೊರೊನಾ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ವೈಫಲ್ಯ ಎದುರಾಗಿರುವುದಾಗಿ ವಿರೋಧ ಪಕ್ಷವು ವಿದೇಶಾಂಗ ಸಚಿವರನ್ನು ತೀವ್ರ ಟೀಕೆಗೆ ಗುರಿ ಮಾಡಿತ್ತು ಎನ್ನಲಾಗಿದೆ.