ಅಮೇರಿಕಾ, ಎ.02 (DaijiworldNews/PY): ಬಂದೂಕುದಾರಿಯೋರ್ವ ಕಟ್ಟಡದೊಳಗೆ ನುಗ್ಗಿ ಮನಬಂದಂತೆ ನಾಲ್ವರನ್ನು ಹತ್ಯೆಗೈದು ಹಲವರನ್ನು ಗಾಯಗೊಳಿಸಿರುವ ಘಟನೆ ದಕ್ಷಿಣ ಕ್ಯಾಲಿಪೋರ್ನಿಯಾದಲ್ಲಿ ಆರೆಂಜೆ ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಆರೆಂಜ್ ಕೌಂಟ್ರಿ ಡಿಸ್ಟಿಕ್ ಅತೊರ್ನಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಗುಂಡು ಹಾರಿಸಿ ವ್ಯಕ್ತಿ ಯಾರು ಎಂದು ತಿಳಿದುಬಂದಿದೆ.
ಸ್ಥಳಿಯ ಪೊಲೀಸರ ಪ್ರಕಾರ, 9 ವರ್ಷದ ಬಾಲಕನೋರ್ವ ಬಂದೂಕನ್ನು ಹಿಡಿದುಕೊಂಡು ಮಹಿಳೆಯ ಜೊತೆ ಕಟ್ಟಡ ಪ್ರವೇಶಿಸುತ್ತಿರುವ ದೃಶ್ಯ ಕಂಡುಬಂದಿದೆ. ಆ ಮಹಿಳೆಯ ಬಾಲಕನ ತಾಯಿ ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ಕೈಗೊಂಡಿದ್ದು, ಇದು ಜನಾಂಗೀಯ ದ್ವೇಷದ ಕಾರಣದಿಂದಾಗಿ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಮೊದಲು ಕಚೇರಿ ಬಳಿಯ ಗೇಟ್ಗಳಿಗೂ ಗುಂಡು ಹಾರಿಸಿ ಕಟ್ಟಡದ ಒಳಗೆ ನುಗ್ಗಿದ್ದಾನೆ ಎಂದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.
ಮೃತರನ್ನು ಅದೇ ಕಟ್ಟಡದ ಯೂನಿ ಫಿಟ್ ಹೋಮ್ಸ್ ಎಂಬ ಕಂಪೆನಿಯ ಮಾಲೀಕ ಲೂಯಿಸ್ ಟೋವರ್ (50) ಎಂದು ಗುರುತಿಸಲಾಗಿದೆ. ಉಳಿದವರಿಗಾಗಿ ಪತ್ತೆಕಾರ್ಯ ನಡೆಯುತ್ತಿದೆ.