ಢಾಕಾ, ಏ.02 (DaijiworldNews/HR): ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಪಹಾಸ್ಯ ಮಾಡುವ ಮ್ಯೂಸಿಕ್ ವಿಡಿಯೋವೊಂದನ್ನು ತಯಾರಿಸಿದ್ದಕ್ಕಾಗಿ ಬಾಂಗ್ಲಾದೇಶದ ಯುವತಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಯುವತಿಯನ್ನು ರಬಿಯುಲ್ ಇಸ್ಲಾಂ (19) ಎಂದು ಗುರುತಿಸಲಾಗಿದೆ.
ಕಟ್ಟುನಿಟ್ಟಾದ ಡಿಜಿಟಲ್ ಸೆಕ್ಯುರಿಟಿ ಆಕ್ಟ್ ಅಡಿಯಲ್ಲಿ ಸರ್ಕಾರದ ಪರ ಯುವ ಮುಖಂಡರ ದೂರಿನ ಆಧಾರದ ಮೇಲೆ ಯುವತಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಅಬ್ದುಲ್ಲಾ ಅಲ್-ಮಾಮುನ್ ತಿಳಿಸಿದ್ದಾರೆ.
ಬಾಂಗ್ಲಾದೇಶಿ ಮತ್ತು ಭಾರತೀಯ ಪ್ರಧಾನ ಮಂತ್ರಿಗಳ ಫೋಟೋಗಳನ್ನು ಬಳಸಿ ಅಪಹಾಸ್ಯದ ಮ್ಯೂಸಿಕ್ ವಿಡಿಯೋವನ್ನು ಮಾಡಿದ್ದು, ಬಳಿಕ ಅದನ್ನು ತಮ್ಮ ಫೇಸ್ಬುಕ್ ಟೈಮ್ಲೈನ್ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಅಲ್-ಮಾಮುನ್ ಹೇಳಿದ್ದಾರೆ.
ಇನನು ಈ ಕಾಯಿದೆಯಡಿ ಯುವತಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದು ಮತ್ತು ಸರ್ಕಾರದ ಮುಖ್ಯಸ್ಥನ ಚಿತ್ರಣವನ್ನು ಕೆಣಕುವ ಮತ್ತು ಕಳಂಕಿತಗೊಳಿಸಿದ ಆರೋಪ ಹೊರಿಸಲಾಗುವುದು ಎನ್ನಲಾಗಿದೆ.