ಇಸ್ಲಾಮಾಬಾದ್, ಎ.03 (DaijiworldNews/PY): "ಸದ್ಯದ ಸಂದರ್ಭದಲ್ಲಿ ಪಾಕಿಸ್ತಾನ ಭಾರತದೊಂದಿಗೆ ವ್ಯಾಪಾರ, ವ್ಯವಹಾರ ನಡೆಸುವುದಿಲ್ಲ" ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನ ಆರ್ಥಿಕ ಸಹಕಾರ ಸಮಿತಿ ಇತ್ತೀಚೆಗೆ ಭಾರತದಿಂದ ಹತ್ತಿ ಆಮದು, ಹತ್ತಿ, ನೂಲು ಹಾಗೂ ಸಕ್ಕರೆಯನ್ನು ಆಮದು ಮಾಡಿಕೊಳ್ಳಬೇಕು ಎಂದ ಶಿಫಾರಸು ಮಾಡಿರುವುದಾಗಿ ತಿಳಿಸಿದೆ.
ಈ ಹಿನ್ನೆಲೆ ಇಮ್ರಾನ್ ಖಾನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಇಮ್ರಾನ್ ಖಾನ್ ಸರ್ಕಾರ ಈ ಶಿಪಾರಸ್ಸನ್ನು ತಿರಸ್ಕರಿಸಿತ್ತು ಎಂದು ವರದಿ ಹೇಳಿದೆ.
"ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ತೀರ್ಮಾನವನ್ನು ವಾಪಾಸ್ ಪಡೆದುಕೊಳ್ಳುವವರೆಗೂ ಭಾರತದೊಂದಿಗೆ ವ್ಯಾಪಾರ ಸಾಧ್ಯವಿಲ್ಲ" ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ವರದಿ ಹೇಳಿದೆ.
ಕಾಶ್ಮೀರದ ವಿವಾದ ವಿಚಾರವಾಗಿ ಯಾವುದೇ ವಸ್ತುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಬಾರದು ಎಂದು ಎರಡು ವರ್ಷಗಳ ಹಿಂದೆ ಹೇರಿದ್ದ ನಿಷೇಧವನ್ನು ತೆರವುಗೊಳಿಸುವ ಸಲುವಾಗಿ ನೂತನವಾಗಿ ಆಯ್ಕೆಯಾಗಿದ್ದ ಆರ್ಥಿಕ ಸಹಕಾರ ಸಮಿತಿಯ ಹಮ್ಮದ್ ಅಜರ್, ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ, ಪಾಕ್ ಸರ್ಕಾರ ಈ ಶಿಫಾರಸ್ಸನ್ನು ತಿರಸ್ಕರಿಸಿದೆ ಎಂದು ವರದಿ ಹೇಳಿದೆ.