ಜೋಹಾನ್ಸ್ಬರ್ಗ್, ಎ.04 (DaijiworldNews/MB) : ಝೂಮ್ ಮೀಟಿಂಗ್ ವೇಳೆ ದಕ್ಷಿಣ ಆಫ್ರಿಕಾ ನಾಯಕನ ಪತ್ನಿ ನಗ್ನರಾಗಿ ಕಾಣಿಸಿಕೊಂಡು ಪತಿಯನ್ನು ಪೇಚಿಗೆ ಸಿಲುಕಿಸಿದ್ದಾರೆ. ಟ್ರೆಡಿಷನಲ್ ಪಕ್ಷದ ಸದಸ್ಯ ಕ್ಸೊಲೈಲ್ ಎನ್ಡ್ಯೂ ಅವರು ಮಾರ್ಚ್ 30ರಂದು ಕೊರೊನಾ ವಿಷಯವಾಗಿ ವಿಡಿಯೋ ಸಂವಾದಲ್ಲಿ (ಝೂಮ್ ಮೀಟಿಂಗ್ನಲ್ಲಿ) ಭಾಗಿಯಾಗಿದ್ದು ಈ ಸಂದರ್ಭ ಈ ಘಟನೆ ನಡೆದಿದೆ.
ಈ ಮೀಟಿಂಗ್ನಲ್ಲಿ ದಕ್ಷಿಣ ಆಫ್ರಿಕಾದ ಇತರ 23 ನಾಯಕರೂ ಕೂಡಾ ಹಾಜರಿದ್ದರು. ನಾಯಕನ ಪತ್ನಿ ಈ ಸಂದರ್ಭ ಆಕಸ್ಮಿಕವಾಗಿ ನಗ್ನರಾಗಿ ಬಂದಿದ್ದು ಇದು ಇತರರಿಗೂ ಕಾಣಿಸಿಕೊಂಡಿದೆ. ಇತರರು ನಗುವುದನ್ನು ನೋಡಿ ಸಂವಾದ ಆಯೋಜಿಸಿದ್ದ ಸಮಿತಿಯ ಅಧ್ಯಕ್ಷೆ ಫೈಥ್ ಮುಥಂಬಿ ಅವರು, ''ನಿಮ್ಮ ಹಿಂದೆ ಇರುವವರು ಸರಿಯಾಗಿ ಬಟ್ಟೆ ಹಾಕಿಲ್ಲ. ನೀವು ದಯವಿಟ್ಟು ಗಮನಿಸಿ. ನಾವು ವಿಡಿಯೋ ಮೀಟಿಂಗ್ನಲ್ಲಿ ಇದ್ದೇವೆ ಎಂದು ಅವರಿಗೆ ತಿಳಿಸಿ'' ಎಂದು ಹೇಳಿದ್ದಾರೆ. ಹಾಗೆಯೇ ''ಇಂತಹ ಘಟನೆ ಇದು ಮೊದಲನೇ ಬಾರಿಗೆ ನಡೆಯುವುದು ಏನಲ್ಲ'' ಎಂದೂ ಹೇಳಿದ್ದಾರೆ.
ಇದರಿಂದ ಪೇಚಿಗೆ ಸಿಲುಕಿದ ನಾಯಕ, ಕ್ಷಮೆಯಾಚಿಸಿದ್ದು, ''ನಾನು ಕ್ಯಾಮೆರಾವನ್ನೇ ನೋಡುತ್ತಿದೆ. ಈ ತಂತ್ರಜ್ಞಾನ ನಮಗೆ ಹೊಸದಾಗಿದ್ದು ಇದರ ಬಗ್ಗೆ ಹೆಚ್ಚಿನ ತರಬೇತಿ ಇಲ್ಲ. ಹಾಗೆಯೇ ಮನೆಯಲ್ಲಿ ಆನ್ಲೈನ್ ಮೀಟಿಂಗ್ಗಳಿಗೆ ಬೇಕಾದ ಖಾಸಗಿತನವಿಲ್ಲ. ಮೀಟಿಂಗ್ ರಾತ್ರಿ 10 ಗಂಟೆಗೆ ಮುಗಿಯಬೇಕಿತ್ತು. ಆದರೆ ಸಭೆ ಮುಂದುವರಿದಿದೆ. ಈ ಬಗ್ಗೆ ತಿಳಿಯದೆ ಆಕೆ ಸ್ನಾನಕ್ಕೆಂದು ನನ್ನ ಹಿಂದಿನಿಂದ ಬಂದಿದ್ದಾಳೆ. ನಾನದನ್ನು ಗಮನಿಸಿಲ್ಲ'' ಎಂದು ಹೇಳಿದ್ದಾರೆ.