ಜಕಾರ್ತಾ, ಎ.04 (DaijiworldNews/MB) : ಇಂಡೋನೇಷ್ಯಾದ ಪೂರ್ವ ನುಸಾ ತೆಂಗಾರ ಪ್ರಾಂತ್ಯದಲ್ಲಿ ಭಾನುವಾರ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ, 9 ಮಂದಿ ಗಾಯಗೊಂಡಿದ್ದಾರೆ ಮತ್ತು ಐವರು ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಫ್ಲೋರೆಸ್ ತೈಮೂರ್ ಜಿಲ್ಲೆಯಲ್ಲಿ ಮುಂಜಾನೆ 1 ಗಂಟೆಗೆ ನೈಸರ್ಗಿಕ ವಿಕೋಪ ಸಂಭವಿಸಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ರಾದಿತ್ಯ ಜಾತಿ ಅವರು ತಿಳಿಸಿದ್ದಾರೆ.
ಈ ದುರಂತದಿಂದಾಗಿ ಹಲವಾರು ಮನೆಗಳು ನೆಲಸಮಾಧಿಯಾಗಿದೆ. ಸೇತುವೆಗಳು ಕೂಡಾ ನಾಶವಾಗಿದೆ ಎಂದು ಮಾಹಿತಿ ನೀಡಿದರು.
ಗಾಯಗೊಂಡ ಎಲ್ಲರಿಗೂ ಹತ್ತಿರದ ಆರೋಗ್ಯ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ಒಂದು ವಾರದೊಳಗೆ ಭಾರಿ ಮಳೆ, ಬಲವಾದ ಗಾಳಿ ಮತ್ತು ಬೃಹತ್ ಅಲೆಗಳ ಮುನ್ಸೂಚನೆ ನೀಡಿದೆ.