ವಾಷಿಂಗ್ಟನ್, ಏ. 06 (DaijiworldNews/HR): ಜಗತ್ತಿನ ವಿವಿಧ ದೇಶಗಳಿಗೆ ಪೂರೈಸುತ್ತಿರುವ ಅನೇಕ ಲಸಿಕೆಗಳನ್ನು ಭಾರತದಲ್ಲೇ ಉತ್ಪಾದಿಸಿದ್ದು, ಈ ರೀತಿಯ ಕಂಪನಿಯನ್ನು ಹೊಂದಿರುವುದು ಭಾರತದ ಅದೃಷ್ಟ. ಭಾರತ ಕೈಗೊಂಡಿರುವ ಲಸಿಕೆ ಕಾರ್ಯಕ್ರಮ ಎಲ್ಲರಿಗೂ ಮಾದರಿ" ಎಂದು ವಿಶ್ವ ಬ್ಯಾಂಕ್ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.
ಈ ಕುರಿತು ಅಂತರರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್ನ ಮುಂಬರುವ ಸಭೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, "ಅಮೇರಿಕಾದ ಜನರಿಗೆ ಲಸಿಕೆ ನೀಡುವ ಬೃಹತ್ ಕಾರ್ಯಕ್ರಮವನ್ನು ಕೂಡ ಭಾರತ ಹಮ್ಮಿಕೊಂಡಿದ್ದು, ಇದು ಇತರ ದೇಶಗಳಿಗೆ ಮಾದರಿ" ಎಂದರು.
ಇನ್ನು "ಅಮೆರಿಕ, ಯುರೋಪ್ ಅಥವಾ ದಕ್ಷಿಣ ಆಫ್ರಿಕಾ ಇಲ್ಲವೇ ಭಾರತದಲ್ಲಿನ ಲಸಿಕಾ ಕಾರ್ಯಕ್ರಮಕ್ಕೆ ಎಷ್ಟು ಲಸಿಕೆಯ ಅಗತ್ಯ ಇದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನಮಗೆ ಲಸಿಕೆ ನೀಡಲು ಭಾರತ ಕೈಗೊಂಡಿರುವ ಕಾರ್ಯಕ್ರಮದಿಂದ ನಾನು ಉತ್ತೇಜಿತನಾಗಿದ್ದೇನೆ" ಎಂದು ಹೇಳಿದ್ದಾರೆ.