ಯಾಂಗೂನ್, ಏ.11 (DaijiworldNews/HR): ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರೋಧಿಸಿ ಪ್ರತಿಭಟನೆ ಮುಂದುವರೆದಿದ್ದು, ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಗೆ 82 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 82 ಜನರ ಹತ್ಯೆ ಮಾಡಿರುವುದು ವರದಿಯಾಗಿದೆ.
ಮಾರ್ಚ್ 14 ರ ನಂತರ ಬಗೋ ನಗರದಲ್ಲಿ ಅತಿ ಹೆಚ್ಚು ಪ್ರತಿಭಟನಾಕಾರರನ್ನು ಹತ್ಯೆ ಮಾಡಲಾಗಿದೆ.
ಬೌದ್ಧ ಮಂದಿರದ ಮೈದಾನದಲ್ಲಿ ಭದ್ರತಾ ಪಡೆಗಳು ಬಗೋದ ಶವಗಳನ್ನು ಸಂಗ್ರಹಿಸಿ ಹಾಕಿದ್ದು, ಗ್ರೇನೆಡ್ ಗಳು, ಮಾರ್ಟರ್ ಗಳು ಸೇರಿದಂತೆ ದೊಡ್ಡ ದೊಡ್ಡ ಪ್ರಮಾಣದ ಶಸ್ತ್ರಸ್ತ್ರಾಗಳನ್ನು ಬಳಸಿ ಭದ್ರತಾ ಪಡೆಗಳು ಜನರ ಮೇಲೆ ದಾಳಿ ಮಾಡಿವೆ ಎಂದು ಆರೋಪಿಸಲಾಗಿದೆ.