ವಾಷಿಂಗ್ಟನ್, ಏ.14 (DaijiworldNews/HR): ಅಫ್ಘಾನಿಸ್ತಾನ್ದಲ್ಲಿರುವ ಎಲ್ಲಾ ಅಮೇರಿಕನ್ ಸೈನಿಕರನ್ನು ಮರಳಿ ತಾಯ್ನಾಡಿಗೆ ಕರೆಸಿಕೊಳ್ಳಲು ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಸರ್ಕಾರ ನಿರ್ಧರಿಸಿದೆ.
ಅಫ್ಘಾನಿಸ್ತಾನ್ದಲ್ಲಿರುವ ಎಲ್ಲಾ ಅಮೇರಿಕನ್ ಸೈನಿಕರನ್ನು ಸೆ.11ರೊಳಗೆ ತನ್ನ ತಾಯ್ನಾಡಿಗೆ ಮರಳಬೇಕು ಎಂದು ಬಿಡೆನ್ ಆಡಳಿತ ಸ್ಪಷ್ಟ ನಿರ್ದೇಶನ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ವೇತಭವನ, ಜೋ ಬಿಡೆನ್ ಹಾಗೂ ಅಫ್ಘಾನಿಸ್ತಾನ್ ರಾಷ್ಟ್ರಪತಿ ಅಶ್ರಫ್ ಘನಿ ನಡುವೆ ಅಮೇರಿಕನ್ ಪಡೆಗಳನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಳ್ಳುವ ಐತಿಹಾಸಿಕ ಒಪ್ಪಂದ ಏರ್ಪಡಲಿದೆ" ಎಂದಿದೆ.
ಅಫ್ಘಾನಿಸ್ತಾನ್ ಸರ್ಕಾರದ ಉನ್ನತ ಅಧಿಕಾರಿ ವಾಹೀದ್ ಓಮರ್ ಮಾತನಾಡಿ, ಅಮೇರಿಕನ್ ಪಡೆಗಳನ್ನು ಮರಳಿ ಪಡೆಯುವ ಯೋಜನೆ ಕುರಿತು ಉಭಯ ದೇಶಗಳ ನಾಯಕರ ನಡುವೆ ಮಾತುಕತೆ ನಡೆಯಲಿದೆ" ಎಂದು ಹೇಳಿದ್ದಾರೆ.
ಇನ್ನು ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನ್ದಲ್ಲಿ ಬೀಡು ಬಿಟ್ಟಿರುವ ಅಮೇರಿಕನ್ ಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ಜಾಗತಿಕ ಬೇಡಿಕೆಗೆ ಇದೀಗ ಮನ್ನಣೆ ದೊರೆತಿದಂತಾಗಿದೆ ಎನ್ನಲಾಗಿದೆ.