ಕೈರೋ, ಏ 15 (DaijiworldNews/MS): ಸುಮಾರು ಒಂದು ವಾರಗಳ ಕಾಲ ಸಿಲುಕಿ ಸುಯೆಜ್ ಕಾಲುವೆಯಲ್ಲಿ ಸರಕು ಹಡಗಳ ಟ್ರಾಫಿಕ್ ಜಾಮ್ ಗೆ ಕಾರಣವಾಗಿದ್ದ ದೈತ್ಯ ಹಡಗು ಎಂ.ವಿ. ಎವರ್ ಗಿವನ್ಗೆ ಬರೋಬ್ಬರಿ 6755.10 ಕೋಟಿ ರೂ. (900 ಮಿಲಿಯನ್ ಡಾಲರ್) ದಂಡ ವಿಧಿಸಿ ಸುಯೆಜ್ ಕಾಲುವೆ ಪ್ರಾಧಿಕಾರ ಆದೇಶ ಹೊರಡಿಸಿದೆ.
ಹಡಗು ಕಂಪೆನಿಯು ಪರಿಹಾರ ನೀಡುವವರೆಗೆ, ನ್ಯಾಯಾಲಯದ ಆದೇಶದಂತೆ ಹಡಗನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ದಂಡ ಪಾವತಿಸುವವರೆಗೆ ಹಡಗನ್ನು ತಮ್ಮ ವಶದಿಂದ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ.
2 ಲಕ್ಷ ಟನ್ ಭಾರದ ಹಡಗು, ಮಾ.23ರಂದು ಕಾಲುವೆಯ ಒಂದು ಬದಿಯ ಕೆಸರಿನಲ್ಲಿ ಹೂತು, ಚಲಿಸದೆ ನಿಂತ ಕಾರಣ 420ಕ್ಕೂ ಅಧಿಕ ಹಡಗುಗಳು ಸಾಲುಗಟ್ಟಿ ನಿಂತಿದ್ದವು ಈಜಿಪ್ಟ್ ಗೆ ಇದರಿಂದ ನಿತ್ಯ 90ರಿಂದ 112 ಕೋಟಿ ರೂ.ಗಳಷ್ಟು ನಷ್ಟವಾಗಿತ್ತು.
ಹಡಗನ್ನು ವಶಕ್ಕೆ ಪಡೆದಿರುವುದರಿಂದ ಹಡಗು ಕಂಪನಿ ಮತ್ತೆ ನ್ಯಾಯಾಲಯಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದೆ.