ಹವಾನ, ಎ.17 (DaijiworldNews/PY): ರೌಲ್ ಕ್ಯಾಸ್ಟ್ರೊ ಅವರು ಕ್ಯೂಬಾ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಪಕ್ಷದ ಜವಾಬ್ದಾರಿಯನ್ನು ಯುವ ಸದಸ್ಯರಿಗೆ ನೀಡುವ ಬಗ್ಗೆ 89 ವರ್ಷದ ರೌಲ್ ಕ್ಯಾಸ್ಟ್ರೊ ಅವರು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಕಮ್ಯುನಿಸ್ಟ್ ಪಕ್ಷದ ಎಂಟನೇ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪಕ್ಷದ ಮೊದಲ ಕಾರ್ಯದರ್ಶಿಯಾಗಿ ನಾನು ನನ್ನ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇಷ್ಟು ದಿನಗಳವರೆಗೆ ನನ್ನ ಕರ್ತವ್ಯವನ್ನು ಪೂರೈಸಿದ ತೃಪ್ತಿ ಹಾಗೂ ವಿಶ್ವಾಸ ನನಗಿದೆ" ಎಂದಿದ್ದಾರೆ.
ಈ ಹಿಂದೆ ಅವರು 2018 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ 60 ವರ್ಷದ ಮಿಗುಯೆಲ್ ಡಿಯಾಜ್-ಕ್ಯಾನೆಲ್ ಅವರತ್ತ ಒಲವು ತೋರುತ್ತಿದ್ದರು. "ಮಿಗುವೆಲ್ ಅವರು ಯುವ ಪೀಳಿಗೆಯ ನಿಷ್ಠಾವಂತರ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ" ಎಂದು ಈ ಹಿಂದೆ ರೌಲ್ ಕ್ಯಾಸ್ಟ್ರೊ ಅವರು ಹೇಳಿದ್ದರು.