ಟೋಕಿಯೊ, ಏ. 19 (DaijiworldNews/HR): ರವಿವಾರ ಭದ್ರತಾ ಪಡೆಗಳು ಯಾಂಗೂನ್ನಲ್ಲಿ ಬಂಧಿಸಿರುವ ಜಪಾನಿನ ಪತ್ರಕರ್ತರೊಬ್ಬರನ್ನು ಬಿಡುಗಡೆ ಮಾಡುವಂತೆ ಜಪಾನ್ ಸರ್ಕಾರ ಮ್ಯಾನ್ಮಾರ್ ಆಡಳಿತವನ್ನು ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಪಾನ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಕತ್ಸುನೊಬು ಕಟೊ, "ಪತ್ರಕರ್ತನನ್ನು ಬಂಧಿಸಿರುವ ಕಾರಣ ಮತ್ತು ಅವರ ವಿವರಗಳನ್ನು ನೀಡುವುದರೊಂದಿಗೆ ಸಾಧ್ಯವಾದಷ್ಟು ಬೇಗ ಅವರನ್ನು ಬಿಡುಗಡೆ ಮಾಡಬೇಕು" ಎಂದಿದ್ದಾರೆ.
ಇನ್ನು ಯಾಂಗೂನ್ನಲ್ಲಿರುವ ಹವ್ಯಾಸಿ ಪತ್ರಕರ್ತ ಹಾಗೂ ನಿಕ್ಕಿ ಬ್ಯುಸಿನೆಸ್ ಪತ್ರಿಕೆಯ ಮಾಜಿ ವರದಿಗಾರ ಯುಕಿ ಕಿಟಝುಮಿ ಬಂಧಿತರು ಎಂದು ಜಪಾನ್ನ ಮಾಧ್ಯಮಗಳು ವರದಿ ಮಾಡಿವೆ.