ಇಸ್ಲಾಮಾಬಾದ್, ಏ. 20 (DaijiworldNews/HR): ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತದಿಂದ ಎರಡು ವಾರಗಳ ಕಾಲ ಪ್ರಯಾಣವನ್ನು ನಿಷೇಧಿಸಿದೆ ಎಂದು ಇಸ್ಲಾಮಾಬಾದಿನ ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಭಾರತದಿಂದ ಭೂ ಅಥವಾ ವಾಯು ಮಾರ್ಗಗಳ ಮೂಲಕ ಬರುವ ಎಲ್ಲಾ ಪ್ರಯಾಣಿಕರನ್ನು ದೇಶಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ವರದಿಯಾಗಿದೆ.
ಕೊರೊನಾದ ಎರಡನೇ ಅಲೆಯಲ್ಲಿ ಸತತ ಆರು ದಿನ 2 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ ನಂತರ ಭಾರತದ ಒಟ್ಟಾರೆ ಕೊರೊನಾ ವೈರಸ್ ಸಂಖ್ಯೆ 15,321,089 ಕ್ಕೆ ಏರಿಕೆಯಾಗಿದೆ.
ಏತನ್ಮಧ್ಯೆ, ಪಾಕಿಸ್ತಾನವು ಪ್ರಸ್ತುತ ಸಾಂಕ್ರಾಮಿಕ ರೋಗದ ಗಂಭೀರ ಮೂರನೇ ಅಲೆಯನ್ನ ಎದುರಿಸುತ್ತಿದೆ, ಮತ್ತು ಅದರ ಮತ್ತಷ್ಟು ಹರಡುವಿಕೆಯನ್ನ ನಿಯಂತ್ರಿಸಲು ಡಾಲೆ, ಕಾಲೇಜು ರಜೆ ಹಾಗೂ ಸಾರ್ವಜನಿಕ ಸಭೆಗಳನ್ನ ನಿಷೇಧಿಸುವುದು ಮತ್ತು ವಾರಕ್ಕೆ ಎರಡು ಬಾರಿ ಮಾರುಕಟ್ಟೆಗಳನ್ನ ಮುಚ್ಚುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ.