ಬಾಗ್ದಾದ್, ಎ.25 (DaijiworldNews/PY): ಇರಾಕ್ ರಾಜಧಾನಿ ಬಾಗ್ದಾದ್ನ ಕೊರೊನಾ ಆಸ್ಪತ್ರೆಯೊಂದರಲ್ಲಿ ಸಿಲಿಂಡರ್ ಟ್ಯಾಂಕರ್ ಸ್ಪೋಟಗೊಂಡು ಬೆಂಕಿ ಅವಘಡ ಸಂಭವಿಸಿ 27 ಮಂದಿ ಮೃತಪಟ್ಟು, ಸುಮಾರು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
"ಬಾಗ್ದಾದ್ನ ಇಮ್ನ್ ಅಲ್ ಖತೀಬ್ ಆಸ್ಪತ್ರೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ಅವಘಡದ ಸಂದರ್ಭ ಆಸ್ಪತ್ರೆಯಲ್ಲಿ 120 ರೋಗಿಗಳು ಇದ್ದರು. ಆಮ್ಲಜನಕದ ಸಿಲಿಂಡರ್ ಸ್ಪೋಟವಾದ ಕಾರಣ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ" ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳನ್ನು ಆಂಬ್ಯುಲೆನ್ಸ್ ಮೂಲಕ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
"ಶ್ವಾಸ ಸಂಬಂಧಿ ಐಸಿಯುನಲ್ಲಿ ಈ ಅವಘಡ ನಡೆದಿದ್ದು, ಅಲ್ಲಿದ್ದ 120 ಮಂದಿಯ ಪೈಕಿ 90 ಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ" ಎಂದು ಇರಾಕ್ ಸರ್ಕಾರದ ಮೂಲಗಳು ಹೇಳಿವೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.