ನ್ಯೂಯರ್ಕ್, ಏ 26(DaijiworldNews/MS): ಭಾರತ ಮತ್ತು ಅಮೇರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಧ್ಯೆ ನಡೆದ ಮಾತುಕತೆಯ ಬೆನ್ನಲ್ಲೆ ಕೋವಿಶೀಲ್ಡ್ ಲಸಿಕೆ ತಯಾರಿಸಲು ಭಾರತೀಯರಿಗೆ ತುರ್ತಾಗಿ ಬೇಕಾದ ಕಚ್ಚಾ ಸಾಮಗ್ರಿ ತಕ್ಷಣ ಒದಗಿಸಲಾಗುವುದು ಎಂದು ಶ್ವೇತಭವನ ಭಾನುವಾರ ತಿಳಿಸಿದೆ.
ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಸಂಬಂಧ ಮಾತನಾಡಿದ್ದರು, ಈ ಸಂದರ್ಭ ಸುಲ್ಲಿವಾನ್ ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು,ಅಮೇರಿಕಾವೂ ಭಾರತದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ . ಇದಕ್ಕಾಗಿ ಸಂಪನ್ಮೂಲಗಳನ್ನು ನೀಡುವುದು ಹಾಗೂ ಆಕ್ಸಿಜನ್ ಉತ್ಪಾದನೆ ಸೇರಿ ಹಲವು ರೀತಿಯಲ್ಲಿ ಭಾರತಕ್ಕೆ ಬೆರವಾಗಲಿದೆ ಎಂದು ಸುಲ್ಲಿವಾನ್ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯ ತಯಾರಿಕೆಗೆ ತುರ್ತಾಗಿ ಅಗತ್ಯವಿರುವ ನಿರ್ದಿಷ್ಟ ಕಚ್ಚಾ ವಸ್ತುಗಳ ಮೂಲಗಳನ್ನು ಯುನೈಟೆಡ್ ಸ್ಟೇಟ್ಸ್ ಗುರುತಿಸಿದೆ, ಅದನ್ನು ತಕ್ಷಣವೇ ಭಾರತಕ್ಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸುಲ್ಲಿವನ್ ಮತ್ತು ದೋವಲ್ ಮಾತುಕತೆ ನಂತರ ಶ್ವೇತಭವನವು ಪ್ರಕಟಣೆಯಲ್ಲಿ ತಿಳಿಸಿದೆ.