ದುಬೈ, ಎ.26 (DaijiworldNews/PY): ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಅನೇಕ ದೇಶಗಳು ಭಾರತದ ಬೆಂಬಲಕ್ಕೆ ನಿಂತಿದ್ದು, ಯುಎಇ ಕೂಡಾ ಭಾರತದ ಬೆಂಬಲ ಸೂಚಿಸಿದೆ.
ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಹಾಗೂ ಅಬುಧಾಬಿಯ ಅಡನಾಕ್ ಪ್ರಧಾನ ಕಚೇರಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬೆಳಗಿಸಿ, ರವಿವಾರ ರಾತ್ರಿ ಭಾರತದ ತ್ರಿವರ್ಣ ಧ್ವಜವನ್ನು ವಿದ್ಯುತ್ ದೀಪಗಳಿಂದ ಪ್ರತಿಬಿಂಬಿಸುವ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿದೆ. "ಸ್ಟೇ ಸ್ಟ್ರಾಂಗ್ ಇಂಡಿಯಾ" ಎನ್ನುವ ಸಂದೇಶ ನೀಡಲಾಯಿತು. ಈ ಮುಖೇನ ಯುಎಇ ಕೊರೊನಾ ವಿರುದ್ದದ ಹೋರಾಟದಲ್ಲಿ ಭಾರತಕ್ಕೆ ಆತ್ಮಸ್ಥೈರ್ಯ ತುಂಬಿದೆ.
ಯುಎಇಯ ಭಾರತದ ರಾಯಭಾರಿ ಕಚೇರಿ ಟ್ವೀಟ್ ಮಾಡಿದ್ದು, "ಭಾರತವು ಕೊರೊನಾ ವಿರುದ್ದ ಹೋರಾಡುತ್ತಿದೆ. ಇದಕ್ಕೆ ಭಾರತದ ಸ್ನೇಹಿ ರಾಷ್ಟ್ರವಾದ ಯುಎಇ ತನ್ನ ಶುಭಾಶಯಗಳನ್ನು ಕಳುಹಿಸಿದೆ. ದುಬೈನ ಬುರ್ಜ್ ಖಲೀಫಾ ತನ್ನ ಬೆಂಬಲವನ್ನು ಸೂಚಿಸಲು ತ್ರಿವರ್ಣ ಧ್ವಜದೊಂದಿಗೆ ನಿಂತಿದೆ" ಎಂದು ತಿಳಿಸಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,52,991 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿಗೆ 2,800 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,92,311 ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ರವಿವಾರ 3,52,991 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. 24 ಗಂಟೆ ಅವಧಿಯಲ್ಲಿ 2812 ಮಂದಿ ಸೋಂಕಿತರು ಸಾವನ್ನಪ್ಪಿದ್ದು, 2,19,272 ಮಂದಿ ಗುಣಮುಖರಾಗಿದ್ದಾರೆ.