ಬ್ರಿಟನ್, ಎ.26 (DaijiworldNews/PY): ಕೊರೊನಾ ವಿರುದ್ದ ಹೋರಾಟದಲ್ಲಿ ಬ್ರಿಟನ್ ಭಾರತಕ್ಕೆ ನೆರವು ನೀಡಲು ಮುಂದಾಗಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಹಾಗೂ ವೆಂಟಿಲೇಟರ್ಗಳನ್ನು ರವಾನಿಸುತ್ತಿರುವುದಾಗಿ ಹೇಳಿದೆ.
ಆಕ್ಸಿಜನ್ ಕಾನ್ಸಂಟ್ರೇಟರ್ ಉಪಕರಣಗಳು ಸೇರಿದಂತೆ ವೆಂಟಿಲೇಟರ್ಗಳು ಹಾಗೂ ಜೀವ ರಕ್ಷಕ ವೈದ್ಯಕೀಯ ಉಪಕರಣಗಳನ್ನು ರವಿವಾರ ರವಾನಿಸಿದ್ದಾಗಿ ತಿಳಿಸಿದೆ. ಬ್ರಿಟನ್ನಿಂದ ರವಿವಾರ ನಿರ್ಗಮಿಸಲಿರುವ ಉಪಕರಣಗಳು ಮಂಗಳವಾರ ಭಾರತಕ್ಕೆ ಬಂದು ತಲುಪಲಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, "ಬ್ರಿಟನ್ ಭಾರತದ ಸ್ನೇಹಿತ ಹಾಗೂ ಪಾಲುದಾರನಾಗಿದ್ದು, ಕೊರೊನಾ ವಿರುದ್ದ ಹೋರಾಟದಲ್ಲಿ ನಾನು ನೆರವಾಗಲಿದ್ದೇನೆ" ಎಂದಿದ್ದಾರೆ.
"600 ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ರವಾನಿಸಲಾಗಿದ್ದು, ಮಂಗಳವಾರದಂದು ಮೊದಲ ಸರಕು ಭಾರತಕ್ಕೆ ತಲುಪಲಿದೆ. ಉಳಿದ ಸರಕುಗಳು ವಾರಾಂತ್ಯದಲ್ಲಿ ತಲುಪಲಿದೆ" ಎಂದು ಬ್ರಿಟನ್ ಹೈ ಕಮೀಷನ್ ಹೇಳಿದೆ.
"ಕಾಮನ್ ವೆಲ್ತ್ ಹಾಗೂ ಅಭಿವೃದ್ಧಿ ಕಚೇರಿಗಳಿಂದ ನೆರವಿನ ಸರಕುಗಳಿಗೆ ಆರ್ಥಿಕ ಸಹಾಯ ದೊರೆತಿದೆ. ಭಾರತ ಸರ್ಕಾರ ಈ ಸರಕುಗಳನ್ನು ಕೊರೊನಾ ರೋಗಿಗಳ ಚಿಕಿತ್ಸೆಗೆ ನೀಡಲಿದೆ" ಎಂದು ಬ್ರಿಟನ್ ತಿಳಿಸಿದೆ.