ಇಸ್ರೇಲ್, ಎ.30 (DaijiworldNews/PY): ಇಸ್ರೇಲ್ನಲ್ಲಿ ನಡೆದ ಧಾರ್ಮಿಕ ಉತ್ಸವದ ವೇಳೆ ನಡೆದ ಕಾಲ್ತುಳಿತದಿಂದಾಗಿ 44 ಮಂದಿ ಮೃತಪಟ್ಟಿದ್ದಾರೆ.
ಲ್ಯಾಗ್ ಬಿ ಓಮರ್ ಆಚರಿಸಲು ಇಸ್ರೇಲ್ನ ಮೌಂಟ್ ಮೆರೂನ್ನಲ್ಲಿ ಸಾಮೂಹಿಕ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾಲ್ತುಳಿತ ಉಂಟಾಗಿ 44 ಮಂದಿ ಮೃತಪಟ್ಟಿದ್ದು, 103 ಮಂದಿ ಗಾಯಗೊಂಡಿದ್ದರು ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಘಟನೆಯ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಪ್ರತಿಕ್ರಿಯಿಸಿದ್ದು, "ಇದು ಭೀಕರ ದುರಂತ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಲ್ತುಳಿತಕ್ಕೆ ಕಾರಣ ಏನೆಂದು ಈವರೆಗೂ ತಿಳಿದುಬಂದಿಲ್ಲ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.