ಸಿಡ್ನಿ, ಮೇ.01 (DaijiworldNews/PY): ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಶೀಘ್ರವೇ ದೇಶಕ್ಕೆ ವಾಪಾಸ್ಸಾಗುವಂತೆ ಆಸ್ಟ್ರೇಲಿಯಾ ಕೆಲದಿನಗಳ ಹಿಂದೆ ಸೂಚಿಸಿತ್ತು. ಇದೀಗ ಆಸ್ಟ್ರೇಲಿಯಾ ಕಠಿಣ ನಿಯಮಕ್ಕೆ ಮುಂದಾಗಿದ್ದು, ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ದೇಶಕ್ಕೆ ವಾಪಸ್ಸು ಬಾರದಂತೆ ನಿಷೇಧ ಹೇರಿದೆ. ನಿಯಮ ಮೀರಿ ದೇಶಕ್ಕೆ ಬಂದಲ್ಲಿ, ಐದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
"ಮೇ 3ರಿಂದ ಆಸ್ಟ್ರೇಲಿಯಾದಲ್ಲಿ ಈ ನಿಯಮ ಜಾರಿಯಲ್ಲಿರಲಿದೆ. ಆಸ್ಟ್ರೇಲಿಯಾದ ಪ್ರಜೆ ಭಾರತದಲ್ಲಿ 14 ದಿನ ತಂಗಿದ್ದರೆ ಅವರು ಆಸ್ಟ್ರೇಲಿಯಾಕ್ಕೆ ವಾಪಸ್ಸಾಗುವಂತಿಲ್ಲ. ಒಂದು ವೇಳೆ ಆಗಮಿಸಿದರೆ ಅವರು ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು" ಎಂದು ಆಸ್ಟ್ರೇಲಿಯಾ ಆರೋಗ್ಯ ಸಚಿವ ಗ್ರೆಗ್ ಹಂಟ್ ಹೇಳಿದ್ದಾರೆ.
"ಭಾರತದಲ್ಲಿರುವ ಆಸ್ಟ್ರೇಲಿಯಾ ಪ್ರಜೆಗಳು ವಾಪಾಸ್ಸಾದರೆ ಇಲ್ಲಿರುವ ಅವರ ಕುಟುಂಬವು ತೊಂದರೆಗೊಳಗಾಗುತ್ತದೆ. ಹಾಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ" ಎಂದಿದ್ದಾರೆ.