ಬೀಜಿಂಗ್, ಮೇ.01 (DaijiworldNews/PY): ತೀವ್ರ ಬಿರುಗಾಳಿ ಬೀಸಿ ಕಟ್ಟಡಗಳು ಕುಸಿದು, ಮರಗಳು ಉರುಳಿದ ಪರಿಣಾಮ 11 ಮಂದಿ ಸಾವನ್ನಪ್ಪಿ, 102 ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಚೀನಾದಲ್ಲಿರುವ ನಾಂಟೊಂಗ್ ನಗರದಲ್ಲಿ ನಡೆದಿದೆ.
"ಪೂರ್ವ ಪ್ರಾಂತ್ಯ ಜಿಯಾಂಗ್ಸುವಿನಲ್ಲಿರುವ ನಾಂಟೊಂಗ್ ನಗರದಲ್ಲಿ ಶುಕ್ರವಾರ ರಾತ್ರಿ ತೀವ್ರ ಹವಾಮಾನ ಏರುಪೇರಾದ ಪರಿಣಾಮ ಯಾಂಗ್ಜಿ ನದಿಮುಖಜ ಭೂಮಿ ಮುಳುಗಿ, ಈ ಅನಾಹುತ ನಡೆದಿದೆ" ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಘಟನೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 3,050 ಮಂದಿಯನ್ನು ಸ್ಥಳಾಂತರಿಸಲಾಗಿದೆ" ಎಂದು ಸ್ಥಳೀಯ ಸರ್ಕಾರ ಹೇಳಿದೆ.
"ಗಂಟೆಗೆ ಸುಮಾರು 162 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ ಪರಿಣಾ ಮೀನುಗಾರರ ಹಡಗು ಉರುಳಿದ್ದು, ಘಟನೆಯಲ್ಲಿ ಇಬ್ಬರು ನಾವಿಕರನ್ನು ರಕ್ಷಿಸಲಾಗಿದೆ. ಉಳಿದಂತೆ 9 ಸಿಬ್ಬಂದಿಗಳು ನಾಪತ್ತೆಯಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ