ಕೆನಡಾ, ಮೇ 06 (DaijiworldNews/MS): 12 ರಿಂದ 15 ವರ್ಷದ ಮಕ್ಕಳಿಗೆ ’ಫೈಜರ್ ಬಯೋಟೆಕ್ ’ ಕೋವಿಡ್ 19 ನೀಡಲು ಕೆನಡಾ ಅನುಮೋದನೆಯನ್ನು ಬುಧವಾರ ಪ್ರಕಟಿಸಿದೆ. ಮಕ್ಕಳಿಗೆ ಮೊದಲ ಡೋಸ್ ನೀಡುವುದನ್ನು ಅನುಮತಿಸಲಾಗುವುದು ಎಂದು ಕೆನಡಾ ಫೆಡರಲ್ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
12–15 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲು ಅನುಮತಿ ಕೋರಿ ಯುರೋಪ್ ಒಕ್ಕೂಟದ ಔಷಧ ನಿಯಂತ್ರಕರಿಗೂ ಕಂಪನಿಯು ಇತ್ತೀಚೆಗೆ ಮನವಿ ಮಾಡಿತ್ತು. ಫೈಜರ್–ಬಯೊಎನ್ಟೆಕ್ ಕೋವಿಡ್ ಲಸಿಕೆಯನ್ನು 16 ವರ್ಷ ಮೇಲ್ಪಟ್ಟವರಿಗೆ ನೀಡಲು ಅಮೆರಿಕದಲ್ಲಿ ಅನುಮತಿ ಇದೆ.
ಆದರೆ ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಕೆನಡಾ ಫೈಜರ್ ಬಯೋಟೆಕ್ ಲಸಿಕೆಯನ್ನು 12 ರಿಂದ 15 ವರ್ಷದ ಮಕ್ಕಳಿಗೆ ನೀಡುವಂತೆ ಅನುಮತಿ ನೀಡಿದೆ. ಇನ್ನು 12–15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್–ಬಯೊಎನ್ಟೆಕ್ ಅಮೆರಿಕಾ ಸರ್ಕಾರಕ್ಕೂ ಮನವಿ ಸಲ್ಲಿಸಿದೆ.