ವಾಷಿಂಗ್ಟನ್ ಮೇ 07 (DaijiworldNews/MS): ಪ್ರಮುಖ ಫೈಝರ್ ಔಷಧ ತಯಾರಿಕಾ ಕಂಪನಿಯೂ 2ರಿಂದ 11 ವರ್ಷ ಒಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ (ಎಫ್ಡಿಎ)ಗೆ ಸೆಪ್ಟೆಂಬರ್ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಇದಲ್ಲದೆ ಮುಂದಿನ ವಾರದ ಆರಂಭದ ವೇಳೆಗೆ, ಕಂಪನಿಯು 12 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ತನ್ನ ಲಸಿಕೆಯ ತುರ್ತು ಬಳಕೆಗಾಗಿ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ನ ಅನುಮೋದನೆಯನ್ನು ಪಡೆಯುವ ನಿರೀಕ್ಷೆಯಿದೆ.
ಪ್ರಸ್ತುತ, ಡಿಸೆಂಬರ್ ನಿಂದ ಫೈಝರ್-ಬಯೋಟೆಕ್ ಲಸಿಕೆಯನ್ನು ವಯಸ್ಕರಿಗೆ ತುರ್ತು ಬಳಕೆಯ ಧೃಡೀಕರಣ ಅಡಿಯಲ್ಲಿ ನೀಡಲಾಗುತ್ತಿದೆ. ಇದಲ್ಲದೆ ಈ ಸಂಸ್ಥೆಯೂ ಗರ್ಭಿಣಿ ಮಹಿಳೆಯರಲ್ಲಿ ಆರಂಭಿಸಿರುವ ಕ್ಲಿನಿಕಲ್ ಟ್ರಯಲ್ ನ ಲಸಿಕೆಯ ಸುರಕ್ಷತೆಯ ಡೇಟಾ ಆಗಸ್ಟ್ ಆರಂಭದ ವೇಳೆಗೆ ಪಡೆಯಲಿದೆ