ಮಾಸ್ಕೋ, ಮೇ 07 (DaijiworldNews/MS): ಈಗಿರುವಂತೆ ಕೊರೊನಾ ಲಸಿಕೆಯ ಎರಡು ಡೋಸ್ ಪಡೆಯಬೇಕಿಲ್ಲ. ಇದನ್ನು ಒಮ್ಮೆ ಪಡೆದರೆ ಸಾಕು ಕೊರೊನಾ ಸೋಂಕಿನಿಂದ ಮನುಷ್ಯರನ್ನು ಪಾರು ಮಾಡಬಲ್ಲ ಸ್ಪುಟ್ನಿಕ್ ಲೈಟ್ ಎಂಬ ಲಸಿಕೆಯನ್ನು ಬಿಡುಗಡೆ ಮಾಡಿರುವುದಾಗಿ ದಿ ರಷ್ಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ (ಆರ್ ಡಿ ಐ ಎಫ್ ) ಗುರುವಾರ ಘೋಷಿಸಿದೆ.
ಸ್ಪುಟ್ನಿಕ್ ಲೈಟ್ ಎಂಬ ಲಸಿಕೆಯನ್ನು ಕೇವಲ ಒಂದು ಬಾರಿ ಮಾತ್ರ ಪಡೆಯಬಹುದಾಗಿದ್ದು, ಕಳೆದ ವರ್ಷ ಡೆಸೆಂಬರ್ ೫ ರಿಂದ ಏ.೧೫ರವರೆಗೆ ನಡೆಸಲಾದ ಪ್ರಾಯೋಗಿಕ ಅಭಿಯಾನದಲ್ಲಿ ಇದನ್ನು ಬಳಸಲಾಗಿದ್ದು ಇದರ ಪ್ರತಿರೋಧ ಶಕ್ತಿ ಸಾಬೀತಾಗಿದೆ. ಸ್ಪುಟ್ನಿಕ್ ಲೈಟ್ ಎಂದು ಕರೆಯಲ್ಪಡುವ ಹೊಸ ಆವೃತ್ತಿಯು ಸುಮಾರು 80% ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ. ಫೆಬ್ರವರಿಯಲ್ಲಿ ಪ್ರಕಟವಾದ ಫಲಿತಾಂಶಗಳ ಪ್ರಕಾರ, ಕೊನೆಯ ಹಂತದ ಪ್ರಯೋಗಗಳಲ್ಲಿ ಸ್ಪುಟ್ನಿಕ್ ವಿ 91.6% ಪರಿಣಾಮಕಾರಿತ್ವವನ್ನು ತೋರಿಸಿದೆ.
ಈ ಲಸಿಕೆಯನ್ನು ರಷ್ಯಾದ ಗ್ಯಾಮೆಲಿಯಾ ಇನ್ಸ್ಟಿಟ್ಯೂಟ್ ತಯಾರಿಸಿದ್ದು ಕರೊನವೈರಸ್ ನ ಎಲ್ಲಾ ಹೊಸ ತಳಿಗಳ ವಿರುದ್ಧ ಸ್ಪುಟ್ನಿಕ್ ಲೈಟ್ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. , ಇದರ ಒಂದು ಡೋಸ್ ನ ಬೆಲೆ ೭೩೭ ರೂ. ಇರಲಿದೆ. ಇದೇ ವೇಳೆ ಮುಂದಿನ ಎರಡು ದಿನಗಳಲ್ಲಿ ಮತ್ತೆ ೧.೫ ಲಕ್ಷ ಲಸಿಕೆಯನ್ನು ರಷ್ಯಾ ಭಾರತಕ್ಕೆ ರವಾನಿಸಲಿದೆ.