ಅಫ್ಘಾನಿಸ್ತಾನ್, ಮೇ. 10 (DaijiworldNews/HR): ಕಾಬೂಲ್ನ ಶಾಲೆವೊಂದರ ಮುಂಭಾಗದಲ್ಲಿ ಮೇ 8ರ ಶನಿವಾರ ನಡೆದ ಬಾಂಬ್ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ ಮೃತರ ಸಂಖ್ಯೆ ಸೋಮವಾರ 60ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಕಾಬೂಲ್ನ ಪಶ್ಚಿಮದಲ್ಲಿರುವ ಸಯೀದ್-ಉಲ್-ಶುಹಾದ್ ಹೈಸ್ಕೂಲ್ನ ಸಮೀಪ ಮೂರು ಸ್ಪೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. "ಘಟನೆಯಲ್ಲಿ ಗಾಯಗೊಂಡವರ ಪೈಕಿ ಹೆಚ್ಚು ಮಹಿಳಾ ವಿದ್ಯಾರ್ಥಿಗಳೇ ಇದ್ದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಉಗ್ರರು ಹೆಣ್ಣುಮಕ್ಕಳ ಶಾಲೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರೇ ಇದ್ದು, ಶಾಲೆಯ ಹಲವು ಅಧಿಕಾರಿಗಳು ಕೂಡ ಇದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ 150ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ಸಾವಿನ ಸಂಖ್ಯೆ 60ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.