ಕಾಬೂಲ್, ಮೇ. 10 (DaijiworldNews/HR): ಈದ್ ಉಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ತಾಲಿಬಾನ್ ಉಗ್ರ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ಮೂರು ದಿನಗಳ ಕದನ ವಿರಾಮ ಘೋಷಿಸಿದೆ ಎಂದು ತಿಳಿದು ಬಂದಿದೆ.
ಕದನ ವಿರಾಮ ಘೋಷಣೆಯ ಕೆಲವು ಗಂಟೆಗಳು ಮುಂಚಿತವಾಗಿ ಜಾಬೂಲ್ ಪ್ರಾಂತ್ಯದಲ್ಲಿ ಬಸ್ಸೊಂದರಲ್ಲಿ ಬಾಂಬ್ ಸ್ಪೋಟಗೊಂಡಿದ್ದು, ಇದರಲ್ಲಿ 11 ಮಂದಿ ಮೃತಪಟ್ಟು 28 ಮಂದಿಗೆ ಗಾಯಗಳಾಗಿವೆ' ಎಂದು ಸಚಿವಾಲಯ ತಿಳಿಸಿದೆ.
ಇನ್ನು ಅಮೇರಿಕಾವು ತನ್ನ ಕೊನೆಯ 2,500 ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದರ ಬೆನ್ನಲ್ಲೇ ತಾಲಿಬಾನ್ನಿಂದ ಕದನ ವಿರಾಮವನ್ನು ಘೋಷಣೆಯಾಗಿದೆ.
ಮೂರು ದಿನಗಳವರೆಗೆ ಶತ್ರುರಾಷ್ಟ್ರದ ಮೇಲೆ ಯಾವುದೇ ದಾಳಿ ನಡೆಸದಂತೆ ಸೂಚಿಸಲಾಗಿದ್ದು, ಒಂದು ವೇಳೆ ಈ ಸಮಯದಲ್ಲಿ ವಿರೋಧಿ ಮೊದಲ ದಾಳಿ ನಡೆಸಿದರೆ, ಇದಕ್ಕೆ ಪ್ರತ್ಯುತ್ತರ ನೀಡಲು ಸಿದ್ಧವಿರಿ ಎಂದು ತಾಲಿಬಾನ್ ಹೇಳಿದೆ.