ನ್ಯೂಯಾರ್ಕ್, ಮೇ 12 (DaijiworldNews/MS): ವಿಶ್ವ ತಾಯಂದಿರ ದಿನದ ಮುನ್ನಾ ದಿನದಂದು ನ್ಯೂಯಾರ್ಕ್ ನಲ್ಲಿ 65 ವರ್ಷದ ತಾಯಿಯನ್ನು ದೌರ್ಜನ್ಯ ಎಸಗಿ ಕೊಂದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಬೆಲ್ಲೆರೋಸ್ ಮ್ಯಾನರ್ನ ಜಮೈಕಾದ ಮನೆಯಲ್ಲಿ ತಮ್ಮ ಮಗನೊಂದಿಗೆ ವಾಸವಿದ್ದ ಸರೋಜಾ ಶರ್ಮನನ್ನು ಮಗ ಪುಷ್ಕರ್ ಶರ್ಮಾ (28) ಶನಿವಾರ ಬೆಳಿಗ್ಗೆ ಮಾರಣಾಂತಿಕ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಪುಷ್ಕರ್ ಶರ್ಮಾ, ಮೊದಲು ಏಕಾಏಕಿ ತಾಯಿ ಸರೋಜಾ ಶರ್ಮಾ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಬಳಿಕ ಕತ್ತು ಹಿಸುಕಿದ್ದಾನೆ. ತಾಯಿ ಕೆಳಗೆ ಬೀಳ್ತಿದ್ದಂತೆ ಕಿರುಕುಳ ನೀಡಿದ್ದಾನೆ. ತಾಯಿ ಮೊದಲು ಪ್ರಜ್ಞೆ ಕಳೆದುಕೊಂಡಿದ್ದು, ಆ ಬಳಿಕ ವಿಪರೀತ ರಸ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ನೆಲಮಾಳಿಗೆಯಲ್ಲಿ ತನ್ನ ತಾಯಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಮಗಳು ಪೊಲೀಸರು ಮಾಹಿತಿ ತಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದು ಆದಾಗಲೇ ಸರೋಜಾ ಸಾವನ್ನಪ್ಪಿದ್ದರು.
ನೆರೆಮನೆಯ ಕೆಲ್ವಿನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, " ಶರ್ಮಾ ಕುಟುಂಬವು ನಿಜವಾಗಿಯೂ ಉತ್ತಮ ಮತ್ತು ಸ್ನೇಹಪರವಾಗಿತ್ತು. ಪುಷ್ಕರ್ ಶರ್ಮಾ ಮಾನಸಿಕ ಅಸ್ವಸ್ಥತೆಯ ನಮಗೆಲ್ಲಾ ತಿಳಿದಿತ್ತು. ಆದರೆ ಆತ ಮಾಡಿರುವ ಕೃತ್ಯದಿಂದ ನಾನು ಆಘಾತಗೊಂಡಿದ್ದೇನೆ" ಎಂದು ಹೇಳಿದ್ದಾರೆ.
ಪುಷ್ಕರ್ ಶರ್ಮಾ ಮಾನಸಿಕ ಅಸ್ವಸ್ಥತೆ ಬಳಲುತ್ತಿದ್ದಎಂದು ಹೇಳಲಾಗಿದೆ. ಶನಿವಾರ ಬೆಳಗ್ಗೆ ನಿದ್ರೆಯಿಂದ ಎದ್ದ ಬಳಿಕ ಯಾರನ್ನಾದರೂ ನೋಯಿಸುವ ಅನಿಯಂತ್ರಿತ ಪ್ರಚೋದನೆಯಾಯಿತು. ಯಾರ ಮೇಲಾದ್ರೂ ಹಲ್ಲೆ ನಡೆಸಬೇಕೆಂಬ ಆಸೆ ಹೆಚ್ಚಾಗಿ ತಾಯಿ ಮೇಲೆ ಹಲ್ಲೆ ನಡೆಸಿದ್ದೇನೆ ಎಂದು ತಾನು ಮಾಡಿದ ಹಿಂಸಾಚಾರವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.