ವಾಷಿಂಗ್ಟನ್, ಮೇ.13 (DaijiworldNews/HR): ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತಕ್ಕೆ ಅಮೇರಿಕಾ ಅಗತ್ಯ ಸಹಕಾರ ನೀಡಬೇಕು ಎಂದು 57 ಅಮೇರಿಕಾ ಕಾಂಗ್ರೆಸಿಗರು ಅಧ್ಯಕ್ಷ ಜೋ ಬಿಡೆನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಸೋಂಕಿಗೆ ಬಲಿಯಾಗುತ್ತಿರುವುದರಿಂದ ಭಾರತ ಕೊರೊನಾ ಕೇಂದ್ರಬಿಂದುವಾಗಿ ಪರಿವರ್ತನೆಯಾಗುತ್ತಿದ್ದು, ಕಷ್ಟಕ್ಕೆ ಸ್ಪಂದಿಸಲು ಇದು ಸೂಕ್ತ ಸಮಯ ಎಂದು ಕಾಂಗ್ರೆಸಿಗ ಬ್ರಾಡ್ ಶೆರ್ಮನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಭಾರತಕ್ಕೆ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್, ಕಾನ್ಸ್ನ್ಟ್ರೆಟರ್ಗಳು, ಕ್ರಯೊಜನಿಕ್ ಟ್ಯಾಂಕರ್ಳು, ರೆಮಿಡಿಸಿವಿರ್, ಟೋಸಿಲ್ಜುಮಬ್ಗಳು, ಬೀಪ್ಆಪ್ಗಳು ಹಾಗೂ ವೆಂಟಿಲೆಟರ್ಸ್ಗಳನ್ನು ಸರಬರಾಜು ಮಾಡುವಂತೆ ಆಗ್ರಹಿಸಿದ್ದು, ಇದರೊಂದಿಗೆ ಎಲ್ಲ ಭಾರತಿಯರಿಗೂ ಲಸಿಕೆ ಸಿಗುವಂತೆ ನೋಡಿಕೊಳ್ಳುವ ಜವಬ್ದಾರಿಯೂ ಅಮೇರಿಕಾದ ಮೇಲಿದೆ ಎಂದು ಒತ್ತಾಯಿಸಿದ್ದಾರೆ.