ಬಿಜೀಂಗ್, ಮೇ 15 (DaijiworldNews/MB) : ಮಂಗಳ ಗ್ರಹದ ಮೇಲೆ ಚೀನಾದ ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಇಳಿಯುವ ಮೂಲಕ ಮಂಗಳ ಗ್ರಹದಲ್ಲಿ ರೋವರ್ ಅನ್ನು ಇಳಿಸಿದ ಎರಡನೇ ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.
ಈ ಹಿಂದೆ ಮೊದಲ ಬಾರಿಗೆ ಅಮೇರಿಕಾ ಮಂಗಳ ಗ್ರಹದ ಮೇಲೆ ರೋವರ್ ಇಳಿಸಿತ್ತು. ಚೀನಾವು 2020ರ ಜುಲೈ 23ರಂದು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡ ಟಿಯಾನ್ವೆನ್–1 ಅನ್ನು ಉಡಾವಣೆ ಮಾಡಿತ್ತು.
ಬಾಹ್ಯಾಕಾಶದಲ್ಲಿ 9 ನಿಮಿಷಗಳ ಕಾಲ ಕಠಿಣ ಪರಿಸ್ಥಿತಿಯನ್ನು ಎದುರಿಸಿದ ಚೀನಾದ ಜುರಾಂಗ್ ರೋವರ್ನ್ನು ಮಂಗಳ ಗ್ರಹದ ದಕ್ಷಿಣ ಪ್ರದೇಶದಲ್ಲಿ ಇಳಿದಿದೆ ಎಂದು ವರದಿಯಾಗಿದೆ. ಸೌರಶಕ್ತಿ ಚಾಲಿತ ಆರು ಚಕ್ರಗಳ ಜುರಾಂಗ್ ರೋವರ್ನಲ್ಲಿ ಆರು ವೈಜ್ಞಾನಿಕ ಸಾಧನಗಳನ್ನು ಅಳವಡಿಸಲಾಗಿದ್ದು, 240 ಕಿ.ಗ್ರಾಂ ತೂಕವನ್ನು ಹೊಂದಿದೆ.
ಇದು ಮೂರು ತಿಂಗಳ ಮಿಷನ್ ಆಗಿದ್ದು, ಈ ಮಿಷನ್ ಮೂಲಕ ಲ್ಯಾಂಡರ್ ಸಹಾಯದಿಂದ ಮಂಗಳ ಗ್ರಹದಲ್ಲಿ ಜೀವದ ಕುರುಹುಗಳನ್ನು ಹುಡುಕುವ ಕಾರ್ಯ ಮಾಡಲಾಗುತ್ತದೆ.