ವಿಶ್ವಸಂಸ್ಥೆ, ಮೇ 17 (DaijiworldNews/MS): ಭಾರತದಲ್ಲಿ ಸೋಮವಾರದಂದು ಕೋವಿಡ್-19 ಸೋಂಕು ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆ ವರದಿಯಾಗಿದೆ. ಆದರೂ ದೈನಂದಿನ ಸಾವಿನ ಪ್ರಕರಣಗಳು ಈಗಲೂ 4,000ಕ್ಕಿಂತಲೂ ಹೆಚ್ಚು ದಾಖಲಾಗಿದೆ. ವೈರಸ್ ವೇಗವಾಗಿ ಹರಡುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆಯ ಕೊರತೆಯಿಂದಾಗಿ ಈ ಸಂಖ್ಯೆ ವಿಶ್ವಾಸಾರ್ಹವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳಿದ್ದಾರೆ.
ಕೊರೊನಾವೈರಸ್ ಎರಡನೇ ಅಲೆ ತೀವ್ರವಾಗಿ ವ್ಯಾಪಿಸಿದ ಪರಿಣಾಮ ದೇಶದಲ್ಲಿ ಕಳೆದೊಂದು ತಿಂಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚು ವರದಿಯಾಗಿತ್ತು. ಹಾಗಿದ್ದರೂ ಕಳೆದ ಕೆಲವು ದಿನಗಳಿಂದ ಕುಸಿತ ಕಂಡರೂ ಸಹ, ಸೋಂಕು ಉತ್ತುಂಗಕ್ಕೇರಿವೆ ಎಂಬ ಬಗ್ಗೆ ಖಚಿತತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ,
ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಬಿ.1.617 ದೇಶ ಹಾಗೂ ವಿದೇಶದಲ್ಲೂ ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ಇನ್ನೂ ಅನೇಕ ಭಾಗಗಳಲ್ಲಿ ಸೋಂಕು ಗರಿಷ್ಟ ಮಟ್ಠದ ಉತ್ತುಂಗಕ್ಕೇರಿಲ್ಲ, ಅಲ್ಲಿ ಈಗಲೂ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ
ಹೆಚ್ಚಿನ ರಾಜ್ಯಗಳಲ್ಲಿ ಪರೀಕ್ಷೆ ಇನ್ನೂ ಅಸಮರ್ಪಕತೆಯಿಂದ ಕೂಡಿದೆ. ಅಲ್ಲದೆ ಅಲ್ಲಿರುವ ಸಕಾರಾತ್ಮಕ ಪ್ರಕರಣಗಳ ದರವನ್ನು ಗಮನಿಸಿದಾಗ ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲವೆಂದು ಸ್ಪಷ್ಟವಾಗುತ್ತದೆ.ಆದ್ದರಿಂದ ಈ ಅಂಕಿಸಂಖ್ಯೆಗಳು ಪ್ರಯೋಜನಕಾರಿಯಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ವಾರ ಸೋಂಕು ಕ್ಷೀಣಿಸಲು ಪ್ರಾರಂಭಿಸಿದ ನಂತರ, ಕಳೆದ 24 ಗಂಟೆಗಳಲ್ಲಿ ಆರೋಗ್ಯ ಸಚಿವಾಲಯದ ಪ್ರಕಾರ ಸೋಮವಾರ ಹೊಸ ಸೋಂಕುಗಳನ್ನು 281,386 ಕ್ಕೆ ಇಳಿದಿದೆ, ಏಪ್ರಿಲ್ 21 ರಿಂದ ಮೊದಲ ಬಾರಿಗೆ 300,000 ಕ್ಕಿಂತಲೂ ಕಡಿಮೆಯಾಗಿದೆ. ದೈನಂದಿನ ಸಾವಿನ ಸಂಖ್ಯೆ 4,106 ರಷ್ಟಿದೆ.