ಲಂಡನ್, ಮೇ 19 (DaijiworldNews/MS): ತನ್ನ ಕಂಪನಿಗಳು ದಿವಾಳಿಯಾಗಿವೆ ಎಂದು ತಿದ್ದುಪಡಿ ಮಾಡಬೇಕೆಂದು ಲಂಡನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರಿಗೆ ಲಂಡನ್ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಕೋರ್ಟ್ ಮಲ್ಯ ವಿರುದ್ದ ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟದ ಪರ ತೀರ್ಪು ಕೊಟ್ಟಿದೆ.
ಈ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ವಿಜಯ್ ಮಲ್ಯ ಅವರ ಈಗ ಕಾರ್ಯನಿರ್ವಹಿಸದ ಕಿಂಗ್ಫಿಶರ್ ಏರ್ಲೈನ್ಸ್ ಸಾಲವನ್ನು ವಸೂಲಿ ಮಾಡುವ ವಿಚಾರದಲ್ಲಿ ಮುನ್ನಡೆ ಸಾಧಿಸಿದೆ. ಮಾತ್ರವಲ್ಲದೆ ಸೆಕ್ಯುರಿಟಿಯನ್ನೂ ವಾಪಸ್ ಪಡೆಯಲು ಹೈಕೋರ್ಟ್ ಸಮ್ಮತಿಸಿದೆ. ಮಲ್ಯ ವಿರುದ್ಧದ ಈ ಆರೋಪದ ವಿಚಾರಣೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದಿದ್ದು, ಜು.26ರಂದು ಅಂತಿಮ ವಿಚಾರಣೆ ನಡೆಯಲಿದೆ.
ಮಲ್ಯ ಸಲ್ಲಿಸಿದ್ದ ಆಸ್ತಿಗಳ ಮೇಲಿನ ಸೆಕ್ಯುರಿಟಿ ಅಂಶ ರದ್ದು ಮಾಡುವ ಬಗ್ಗೆ ಬ್ಯಾಂಕ್ಗಳ ಒಕ್ಕೂಟ ವಾದಿಸಿತ್ತು.ಆಸ್ತಿಗಳ ಮೇಲಿನ ಭದ್ರತೆಯನ್ನು ರದ್ದುಪಡಿಸಿ ಸಾಲ ವಸೂಲಾತಿಗೆ ಸಹಕರಿಸಬೇಕು ಎಂದು ಬ್ಯಾಂಕ್ಗಳು ಹೇಳಿತ್ತು. ಅದನ್ನು ಪುಷ್ಟೀಕರಿಸಿದ ಜಡ್ಜ್ ಮೈಕೆಲ್ ಬ್ರಿಗ್ಸ್ ಆಸ್ತಿಗಳಿಗೆ ನೀಡಲಾಗಿರುವ ಸೆಕ್ಯುರಿಟಿ ರದ್ದು ಮಾಡಲು ಯಾವ ತಡೆಯೂ ಇಲ್ಲ ಎಂದರು. ದಿವಾಳಿ ಕಾಯ್ದೆಯ ಅನ್ವಯ ಆಸ್ತಿಗಳ ವಿಲೇವಾರಿ ಬಗ್ಗೆ ಅವಕಾಶ ಬ್ಯಾಂಕ್ಗಳಿಗೆ ಇದೆ ಎಂದರು