ವಾಷಿಂಗ್ಟನ್, ಮೇ.19 (DaijiworldNews/HR): 2022 ರ ಚಳಿಗಾಲದ ಒಲಿಂಪಿಕ್ಸ್ ಚೀನಾದ ಬೀಜಿಂಗ್ನಲ್ಲಿ ನಡೆಯಲಿದ್ದು, ಯು.ಎಸ್. ಬಹಿಷ್ಕರಿಸಲು ಯು.ಎಸ್. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕರೆ ನೀಡಿದ್ದು, ಚೀನಾವು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಮತ್ತು ಈ ಒಲಿಂಪಿಕ್ಸ್ನಲ್ಲಿ ಹಾಜರಾದರೆ ಜಾಗತಿಕ ನಾಯಕರು ತಮ್ಮ ನೈತಿಕ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಯುಎಸ್ನಲ್ಲಿ ಶಾಸಕರು ಒಲಿಂಪಿಕ್ ಬಹಿಷ್ಕಾರ ಮತ್ತು ಸ್ಥಳ ಬದಲಾವಣೆಯ ಬಗ್ಗೆ ಧ್ವನಿ ಎತ್ತಿದ್ದು, ಅಮೇರಿಕಾದ ಪಾಲಿಕೆಯ ವಿರುದ್ದ ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಚೀನಾದಲ್ಲಿ ಅಲ್ಲಿನ ಸರ್ಕಾರವು ಉಯಿಘರ್ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಹತ್ಯಾಕಾಂಡದ ವಿಚಾರದಲ್ಲಿ ವಿದೇಶಾಂಗ ಇಲಾಖೆಯ ಮೌನವನ್ನು ಪ್ರಶ್ನಿಸಿದ್ದಾರೆ.
ಇನ್ನು ವಿಶ್ವದ ಎಲ್ಲಾ ದೇಶದ ನಾಯಕರುಗಳು ಈ ಒಲಿಂಪಿಕ್ಸ್ ಅನ್ನು ತ್ಯಜಿಸಬೇಕು ಎಂದು ಆಗ್ರಹಿಸಿರುವ ಡೆಮಾಕ್ರಿಟಿಕ್ ಪಕ್ಷದ ಪೆಲೋಸಿ, ರಾಷ್ಟ್ರ ಮುಖ್ಯಸ್ಥರು ಚೀನಾಕ್ಕೆ ಹೋಗುವ ಮೂಲಕ ಚೀನಾ ಸರ್ಕಾರಕ್ಕೆ ಗೌರವ ನೀಡಬಾರದು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಚೀನಾದಲ್ಲಿ ನಡೆಯುತ್ತಿರುವ ನರಮೇಧ ಬೆಳಕಿಗೆ ಬಂದ ಬಳಿಕವೂ ಚೀನಾಕ್ಕೆ ಹೋಗಿ ಅಲ್ಲಿನ ಒಲಿಂಪಿಕ್ಸ್ ಮೊದಲಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದರೆ, ವಿಶ್ವದ ಬೇರೆ ಸ್ಥಳದಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರಶ್ನಿಸಲು ನಿಮಗೆ ಯಾವ ನೈತಿಕ ಅಧಿಕಾರವಿದೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಒಲಿಂಪಿಕ್ಸ್ ವಿಚಾರದಲ್ಲಿ ಚೀನಾದ ದೇಶೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಯುಎಸ್ನ ಪ್ರಯತ್ನವು ವಿಫಲವಾಗಲಿದೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ಹೇಳಿದ್ದಾರೆ.