ಜೆರುಸಲೇಮ್, ಮೇ 21(DaijiworldNews/MS): ಕಳೆದ 11 ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷ ಕೊನೆಗೊಳಿಸುವ ಉದ್ದೇಶದಿಂದ ಕದನ ವಿರಾಮ ಘೋಷಿಸಲು ಹಮಸ್ ಮತ್ತು ಇಸ್ರೆಲ್ ಒಪ್ಪಿಕೊಂಡಿದೆ.
ಸೆಕ್ಯುರಿಟಿ ಕ್ಯಾಬಿನೆಟ್ ಜತೆಗಿನ ತಡರಾತ್ರಿಯ ಸಭೆಯ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರ ಕಚೇರಿ ಕದನ ವಿರಾಮವನ್ನು ಘೋಷಣೆ ಮಾಡಿದೆ.ಈ ವಿಚಾರವಾಗಿ ಹೇಳಿಕೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರ ಕಚೇರಿಯು "ಇಸ್ರೇಲ್ ನ ಭದ್ರತಾ ಸಚಿವಾಲಯವೂ ಈಜಿಪ್ಟಿನ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿರುವುದಾಗಿ " ಹೇಳಿದೆ.
ಗಾಜಾಪಟ್ಟಿಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ರಾಯಭಾರಿ ಟೋರ್ ವೆನ್ನೆಸ್ಲ್ಯಾಂಡ್ ಅವರು ಹಮಸ್ ಮುಖ್ಯಸ್ಥ ಇಸ್ಲಾಯಿಲ್ ಹನಿಯೆನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ
ಇಸ್ರೇಲ್ ನಿಂದ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಗಾಜಾ ಪಟ್ಟಿಯ ಜನರಲ್ಲಿ ಸಂಭ್ರಮ ಮನೆಮಾಡಿದೆ.