ಅಲಬಾಮಾ, ಮೇ 21(DaijiworldNews/MS): ಸುಮಾರು ಮೂರು ದಶಕಗಳಲ್ಲಿ ಮೊದಲ ಬಾರಿಗೆ, ಅಲಬಾಮಾದ ಸಾರ್ವಜನಿಕ ಶಾಲೆಗಳಲ್ಲಿ ಯೋಗವನ್ನು ಕಲಿಸಲು ಅನುವು ಮಾಡಿಕೊಡಲಾಗುವ ಮಸೂದೆಗೆ ಅಲ್ಲಿನ ಗವರ್ನರ್ ಕೇ ಐವಿ ಅವರು ಗುರುವಾರ ಸಹಿ ಹಾಕಿದ್ದಾರೆ. ಹೀಗಾಗಿ ಯೋಗ ಕಲಿಕೆಗೆ ಮೂರು ದಶಕಗಳ ನಿರ್ಬಂಧ ತೆರವುಗೊಳಿಸಿದಂತಾಗುತ್ತದೆ.
1993ರಲ್ಲಿ ಅಲಬಾಮಾ ರಾಜ್ಯ ಶಿಕ್ಷಣ ಮಂಡಳಿಯು ಯೋಗವು ಹಿಂದೂ ಧರ್ಮದೊಂದಿಗೆ ಸಂಬಂಧವನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಶಾಲೆಗಳಲ್ಲಿ ಯೋಗವನ್ನು ಕಲಿಸದಂತೆ ನಿರ್ಬಂಧ ಹೇರಿತ್ತು. ಆಗಸ್ಟ್ 1ರಿಂದ ಹೊಸ ಕಾನೂನು ಜಾರಿಗೆ ಬರಲಿದ್ದು ಶಿಶುವಿಹಾರದಿಂದ 12ನೇ ತರಗತಿಯವರೆಗೆ ಯೋಗವನ್ನು ಐಚ್ಛಿಕ ವಿಷಯವಾಗಿ ಆರಿಸಲು ಅನುವು ಮಾಡಿಕೊಡುವ ಮಸೂದೆಗೆ ಗವರ್ನರ್ ಕೇ ಐವಿ ಅವರು ಸಹಿ ಹಾಕಿದ್ದಾರೆ.
ಆದರೆ "ನಮಸ್ತೆ" ಭಂಗಿ ಹಾಗೂ ಸಂಸ್ಕೃತ ಹೆಸರುಗಳನ್ನು ಬಳಸುವುದನ್ನು ಸಂಸ್ಕೃತ ಹೆಸರುಗಳನ್ನು ಹಾಗೂ ಉಸಿರಾಟದ ವ್ಯಾಯಾಮ ಮತ್ತು ವಿಸ್ತರಣೆಗಳನ್ನು ಸಂಯೋಜಿಸುವ ಅಭ್ಯಾಸಕ್ಕೆ ಸಂಬಂಧಿಸಿದ ಅತ್ಯಂತ ಜನಪ್ರಿಯ ಮಂತ್ರಗಳಲ್ಲಿ ಒಂದಾದ “ಓಂ” ಶಬ್ದವನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ.
ಕೆಲವು ಸಂಪ್ರದಾಯವಾದಿ ಗುಂಪುಗಳು ನಿಷೇಧ ಹಿಂಪಡೆಯಬಾರದು ಯೋಗದ ಅಭ್ಯಾಸವು ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದಿಂದ ಬೇರ್ಪಡಿಸಲಾಗದು ಇದೊಂದು ಧಾರ್ಮಿಕ ಚಟುವಟಿಕೆಯಾಗಿದೆ ಎಂದು ವಾದಿಸಿದ್ದರು.